ನವಲಗುಂದ : ಗ್ರಾಮೀಣ ಭಾಗದಲ್ಲಿ ಟಗರಿನ ಕಾಳಗ ಅಂದ್ರೆ ಸಾಕು ಜನರಿಗೆ ಅದೇ ಒಂದು ದೊಡ್ಡ ಹಬ್ಬವಿದ್ದಂತೆ, ಗುರುವಾರ ಇಂತಹ ಹಬ್ಬ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಏರ್ಪಟ್ಟಿತ್ತು. ಜನರು ಶಿಳ್ಳೆ ಚಪ್ಪಾಳೆ ಮೂಲಕ ಕೇಕೆ ಹಾಕಿ ಸಂಭ್ರಮ ಪಟ್ಟರು.
ಹೌದು ಗುಮ್ಮಗೋಳ ಗ್ರಾಮ ಪಂಚಾಯತ್ ಹಾಗೂ ಗೆಳೆಯರ ಬಳಗದ ಆಶ್ರಯದಲ್ಲಿ ಇಂದು ಗ್ರಾಮದ ಚಾಟ್ನಿ ಪ್ಲಾಟ್ ನಲ್ಲಿ ಟಗರಿನ ಕಾಳಗವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಕಾಳಗಕ್ಕೆ ನಾಲ್ಕು ಹಲ್ಲಿನ, ಎರಡು ಹಲ್ಲಿನ ಹಾಗೂ ಹಾಲು ಹಲ್ಲಿನ ಟಗರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಗುಮ್ಮಗೋಳ ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲಿನ ನೂರಾರು ಜನರು ಟಗರಿನ ಕಾಳಗ ನೋಡಲು ಕಿಕ್ಕಿರಿದು ಸೇರಿದ್ದರು.
Kshetra Samachara
18/11/2021 10:25 pm