ಕಲಘಟಗಿ: ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಆದಿ ಜಾಂಬವ ಮಾದಿಗ ಯುವಕ ಸಂಘದ ಗ್ರಾಮ ಶಾಖೆಯನ್ನು ಉದ್ಘಾಟಿಸಲಾಯಿತು.
ಗ್ರಾಮದ ಹಿರಿಯರಾದ ಶಿವಪ್ಪ ದೊಡ್ಡಮನಿ ಅವರು ಡಾ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮ ಶಾಖೆಯನ್ನು ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು.
ಅಖಿಲ ಕರ್ನಾಟಕ ಆದಿ ಜಾಂಬವ ಮಾದಿಗ ಯುವಕ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ಮಾದರ ಮಾತನಾಡಿ,ಯುವಕರು ಸಂಘಟಿತರಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ದೊಡ್ಡಮನಿ,ಶಂಕ್ರಪ್ಪ ದೊಡ್ಡಮನಿ,ಈಶ್ವರಪ್ಪ ದೊಡ್ಡಮನಿ,ನಿಂಗಪ್ಪ ದೊಡ್ಡಮನಿ,ಯಲ್ಲಪ್ಪ ಹರಿಜನ,ಗೋಪಾಲ ಕೆಳಗಿನಮನಿ ಉಪಸ್ಥಿತರಿದ್ದರು.
Kshetra Samachara
29/09/2020 12:02 pm