ಅಣ್ಣಿಗೇರಿ: ಪದ್ಮಶ್ರೀ ಪುರಸ್ಕೃತ ಅಬ್ದುಲ್ ಖಾದರ್ ನದಕಟ್ಟಿನ್ ಅವರಿಗೆ ಇಂದು ಅಣ್ಣಿಗೇರಿ ಪಟ್ಟಣದ ನಿಂಗಮ್ಮ ಎಸ್ ಹೂಗಾರ್ ಕಾಲೇಜಿನಲ್ಲಿ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಡಕಟ್ಟಿನ್ ರೈತರಿಗೆ ಉಪಯೋಗವಾಗುವ ಹೊಸ ವಿನ್ಯಾಸದ ಕೃಷಿ ಸಲಕರಣೆಗಳನ್ನು ಕಂಡು ಹಿಡಿಯುವುದು ನನ್ನ ಜೀವನದ ಉದ್ದೇಶ ಎಂದು ತಿಳಿಸಿದ್ರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಕೃಷಿ ಸಲಕರಣೆಗಳನ್ನು ಕಂಡು ಹಿಡಿಯುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ರು. ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಸೃಇ ಹಲವು ಗಣ್ಯರು ಭಾಗಿಯಾಗಿದ್ರು
Kshetra Samachara
16/03/2022 03:16 pm