ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೆಹಲಿಯಲ್ಲಿ ಪ್ರಜ್ವಲಿಸಲಿದೆ ಹುಬ್ಬಳ್ಳಿಯ ಭರತನಾಟ್ಯ: ಗಣರಾಜ್ಯೋತ್ಸವಕ್ಕೆ ಮಯೂರಿ ನೃತ್ಯ ತಂಡದ ಪ್ರದರ್ಶನ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಅಂದರೆ ನಿಜಕ್ಕೂ ಒಂದು ಗತ್ತು ಗಮ್ಮತ್ತನ್ನು ಮೊದಲಿನಿಂದಲೂ ಮೈಗೂಡಿಸಿಕೊಂಡು ಬಂದಿದೆ. ಈಗ ಹುಬ್ಬಳ್ಳಿ ಗತ್ತು ದೇಶಾದ್ಯಂತ ವ್ಯಾಪಿಸಲಿದೆ. ಹುಬ್ಬಳ್ಳಿಯ ಪ್ರತಿಭೆಗಳಿಗೆ ಸದವಕಾಶವೊಂದು ಬಂದಿದ್ದು, ಹುಬ್ಬಳ್ಳಿ ಕೀರ್ತಿ ಮತ್ತಷ್ಟು ಹೆಚ್ಚಲಿದೆ.

ಹುಬ್ಬಳಿಯ ಭರತನಾಟ್ಯ, ನೃತ್ಯಪಟುಗಳಿಗೆ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುವ ಸದವಕಾಶ ಲಭ್ಯವಾಗಿದೆ. ಇಲ್ಲಿನ ಮಯೂರಿ ನೃತ್ಯ ಅಕಾಡೆಮಿಯ 10 ಪಟುಗಳು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಭವ್ಯ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಕರ್ನಾಟಕದಿಂದ ಒಟ್ಟು 37 ನೃತ್ಯ ಪಟುಗಳು ನೃತ್ಯ ಪ್ರರ್ಶನ ಮಾಡಲಿದ್ದಾರೆ. ಉಡುಪಿ ಜಿಲ್ಲೆಯ ಉಡುಪಿ ಫೀಟ್ಸ್, ಬೆಂಗಳೂರಿನ ನಾಟ್ಯಶ್ವರ ನೃತ್ಯ ಶಾಲೆ ಹಾಗೂ ಹುಬ್ಬಳ್ಳಿಯ ಮಯೂರಿ ನೃತ್ಯ ಅಕಾಡೆಮಿಯ ಒಟ್ಟು 37 ಪಟುಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಇನ್ನೂ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ಒಟ್ಟು 480 ನೃತ್ಯ ಪಟುಗಳು ನೃತ್ಯ ಮಾಡಲಿದ್ದಾರೆ.ಈಗಾಗಲೇ ಆಯ್ಕೆಯಾದ ತಂಡಗಳು ನವದೆಹಲಿಗೆ ತಲುಪಿದ್ದು, ಅಲ್ಲಿ ಜನಪಥದಲ್ಲಿ ನೃತ್ಯ ಪ್ರದರ್ಶನ ನೀಡುವ ದಿಸೆಯಲ್ಲಿ ತರಬೇತಿ ಪಡೆಯುತ್ತಿವೆ. ಉಡುಪಿ ತಂಡ ಜನಪದ ನೃತ್ಯ ಪ್ರದರ್ಶನ ಮಾಡಿದರೆ, ಹುಬ್ಬಳ್ಳಿ ತಂಡ ಭರತನಾಟ್ಯ ಪ್ರದರ್ಶಿಸುವುದು, ಕೇಂದ್ರ ಸರಕಾರ 75ನೇ ಗಣರಾಜ್ಯೋತ್ಸವ ನಿಮಿತ್ತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೇ ನೃತ್ಯ ತಂಡಗಳ ಆಯ್ಕೆ ಪ್ರಕ್ರಿಯೆ ಸುಲಭವಾಗಿರಲಿಲ್ಲ. ನಾಲ್ಕು ಹಂತದಲ್ಲಿ ಸ್ಪರ್ಧೆಗಳನ್ನು ಎದುರಿಸಿ ತಂಡವನ್ನು ಆಯ್ಕೆ ಮಾಡಲಾಗಿದೆ. ದೇಶದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗದಿಂದ ಒಟ್ಟು 60 ತಂಡಗಳನ್ನು ಆಯ್ಕೆ ಮಾಡಲಾಗಿದೆ. ದೆಹಲಿಯಲ್ಲಿ ನೃತ್ಯ ಗುರುಗಳು ಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಗಣರಾಜ್ಯೋತ್ಸವ ದಿನದಂದು ಗೀತೆಯ ನೃತ್ಯವನ್ನು ಹುಬ್ಬಳ್ಳಿ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯ ಕೀರ್ತಿ ಒಂದಿಲ್ಲೊಂದು ರೀತಿಯಲ್ಲಿ ದೇಶಾದ್ಯಂತ ಹಾಗೂ ಜಗತ್ತಿನಾದ್ಯಂತ ಹರಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಇನ್ನೂ ಹೆಚ್ಚಿನ ಅವಕಾಶ ಹುಬ್ಬಳ್ಳಿಯವರಿಗೆ ಒದಗಿ ಬರಲಿ ಎಂಬುವುದು ನಮ್ಮ ಆಶಯ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/01/2022 11:20 am

Cinque Terre

117.01 K

Cinque Terre

7

ಸಂಬಂಧಿತ ಸುದ್ದಿ