ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ದಿ. 27 ಹುಬ್ಬಳ್ಳಿಯ ಸುನಿಧಿ ಕಲಾ ಸೌರಭ್ ಸಂಸ್ಥೆಯಿಂದ " ಅನಾಥರ ಮಾಯಿ ''

ಹುಬ್ಬಳ್ಳಿ : ಬೀದಿಯಲ್ಲಿ ಬೀಸಾಕಿದ ಅನಾಥ ಮಕ್ಕಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಸಾಕಿ ಸಲುಹಿದ ಮಹಾನ್ ಮಾತೆ ಮಹಾರಾಷ್ಟ್ರದ ಶ್ರೀಮತಿ ಸಿಂಧುತಾಯಿ ಸಕಪಾಳ್ ಅವರ ಜೀವನ ಆಧಾರಿತ " ಅನಾಥರ ಮಾಯಿ '' ಎಂಬ ನಾಟಕ ಬುಧವಾರ ದಿ. 27 ರಂದು ಸಂಜೆ 6:30 ಕ್ಕೆ ಸರಿಯಾಗಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಹಾಗೂ ಖ್ಯಾತ ಅಭಿನೇತ್ರಿ ಶ್ರೀಮತಿ ವೀಣಾ ಅಠವಲೆ ಅವರು ಸಿಂಧುತಾಯಿ ಸಪಕಾಳ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಅವಳಿ ನಗರದ 20 ಕ್ಕೂ ಹೆಚ್ಚು ಕಲಾವಿದರು ಅಭಿಯನಯಿಸಲಿದ್ದಾರೆ.

ಈವರೆಗೆ 160 ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿದ ರಂಗಭೂಮಿ ನಟ- ನಿರ್ದೇಶಕ, ಅನುವಾದಕ ರಂಗಾಯಣದ ಮಾಜಿ ನಿರ್ದೇಶಕ ಸುಭಾಸ್ ನರೇಂದ್ರ ಅವರ ಪರಿಕಲ್ಪನೆ ಹಾಗೂ ನಿರ್ದೇಶನದ ಅನಾಥರ ಮಾಯಿ ನಾಟಕ ಮೂಡಿ ಬರಲಿದೆ. ವೇದಿಕೆ ಕಾರ್ಯಕ್ರಮವಿಲ್ಲದೆ ಸರಿಯಾದ ಸಮಯಕ್ಕೆ ನೇರವಾಗಿ ಆರಂಭವಾಗಲಿರುವ ನಾಟಕಕ್ಕೆ ಉಚಿತ ಪ್ರವೇಶವಿದೆ.

ಈಗಾಗಲೇ ಅನೇಕ ಪ್ರಯೋಗಗಳನ್ನು ಕಂಡಿರುವ ಅನಾಥರ ಮಾಯಿ ನಾಟಕ, ದೆಹಲಿ ರಾಷ್ಟ್ರೀಯ ನಾಟಕ ಶಾಲೆ ಹಮ್ಮಿಕೊಂಡಿರುವ ಉತ್ಸವವೊಂದರಲ್ಲಿ ಪ್ರದರ್ಶಿಸಲು ಆಯ್ಕೆಯಾಗಿರುವುದು ಹುಬ್ಬಳ್ಳಿಗರಿಗೆ ಹೆಮ್ಮೆ ವಿಷಯ.

" ಅನಾಥರ ಮಾಯಿ '' ಪರಿತ್ಯಕ್ತಳ ಯಶೋಗಾಥೆ

ಬಡತನವನ್ನೇ ಹಾಸಿ ಹೊದ್ದುಕೊಂಡ ಕುಟುಂಬವೊಂದರಲ್ಲಿ ಜನಿಸಿದ್ದ ಸಿಂಧುತಾಯಿಗೆ ಕೇವಲ 10 ವರ್ಷವಿರುವಾಗ ತನಗಿಂತ 20 ವರ್ಷ ದೊಡ್ಡ ವ್ಯಕ್ತಿಯೊಂದಿಗೆ ಮದುವೆ. 20 ವರ್ಷ ತಲುಪುವಾಗಲೇ ಮೂರು ಮಕ್ಕಳ ತಾಯಿ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸಿಡಿದು ನಿಂತಾಗ ತುಂಬು ಗರ್ಭಿಣಿ ಪತಿಯಿಂದ ಪರಿತ್ಯಕ್ತಳಾಗಬೇಕಾಗುತ್ತದೆ. ಹಿಂಸೆ, ತಾತ್ಸಾರ, ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ಭಿಕ್ಷೆ ಬೇಡಿ ಬದುಕುತ್ತಾಳೆ. ತನ್ನಂತೆ ಇತರ ಅನಾಥ ಮಕ್ಕಳ ಬಾಳು ದಯನೀಯವಾಗಬಾರದೆಂದು ಪಣ ತೊಟ್ಟು ಅವರನ್ನು ಸಾಕಿ ಸಲಹಲು ಆರಂಭಿಸುತ್ತಾಳೆ. ಇದು ನಾಟಕದ ತಿರುಳು.

ಈವರೆಗೆ 1550 ಆನಾಥ ಮಕ್ಕಳನ್ನು ಸಾಕಿ ಸಲುಹಿದ ಸಿಂಧುತಾಯಿ ಯಶೋಗಾಥೆ, ಮೇರು ನಟ ಅಮಿತಾಭ ಬಚ್ಚನ್ ಅವರ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತ್ತು. ವೇದಿಕೆಯಲ್ಲಿ ಈ ತಾಯಿಯ ಕಥೆಯನ್ನು ಕೇಳಿದ ಬಚ್ಚನ್ ಸಹ ಭಾವುಕರಾಗಿದ್ದರು.

Edited By : Shivu K
Kshetra Samachara

Kshetra Samachara

26/10/2021 02:21 pm

Cinque Terre

30.99 K

Cinque Terre

2

ಸಂಬಂಧಿತ ಸುದ್ದಿ