ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಭೆ ಆರ್ಯನ್ ಶೆಟ್ಟರ್- ಅಸಾಧಾರಣ ಪ್ರತಿಭೆ ಪುರಸ್ಕಾರಕ್ಕೆ ಭಾಜನ!

ಹುಬ್ಬಳ್ಳಿ: ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಬಾಲಕ ಆರ್ಯನ್ ಕಿರಣ ಶೆಟ್ಟರ್ ಅಸಾಧಾರಣ ಪ್ರತಿಭೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೌದು.. ಈ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮೂಲಕ ಸಾಧನೆ ಮಾಡಿದ್ದ ಬಾಲಕನ ವಿಶೇಷ ಸ್ಟೋರಿ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಇಂಡಿಯಾ ಗಾಟ್ ಟ್ಯಾಲೆಂಟ್ ಅವಾರ್ಡ್ ಕೂಡ ಪಡೆದುಕೊಂಡಿದ್ದ ಆರ್ಯನ್ ಈಗ ಅಸಾಧಾರಣ ಪ್ರತಿಭೆ ಎಂಬ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ.

ಇನ್ನೂ ಹುಬ್ಬಳ್ಳಿಯ ಕಿರಣ ಶೆಟ್ಟರ್ ಹಾಗೂ ನೀಲಾಂಬಿಕಾ ಶೆಟ್ಟರ್ ಅವರ ಪುತ್ರ ವಯಸ್ಸಿಗೂ ಮೀರಿದ ಸಾಧನೆ ಮಾಡುತ್ತಾ ಬಂದಿದ್ದು, ಈಗ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತನ ಸಾಧನೆ ಗುರುತಿಸಿ ಹತ್ತು ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದೆ. ಹುಬ್ಬಳ್ಳಿಯ ಪ್ರತಿಭೆಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/03/2023 12:20 pm

Cinque Terre

57.35 K

Cinque Terre

2

ಸಂಬಂಧಿತ ಸುದ್ದಿ