ಹುಬ್ಬಳ್ಳಿ : ಆಧುನಿಕ ಕಾಲದಲ್ಲಿ ಹೊಸ ಹೊಸ ಶೈಲಿಯ ಅದೆಷ್ಟೋ ಹಾಡು, ಸಂಗೀತ ನೃತ್ಯಗಳು ಸಂಯೋಜನೆಗೊಂಡರು ಅವುಗಳು ಈ ಜಾನಪದ ಹಾಗೂ ವಚನಗಳ ಶೈಲಿಯ ಉನ್ಮಾದದ ಸ್ವಂತಿಕೆಯನ್ನು ಸಾರಲು ಸಾಧ್ಯವಿಲ್ಲ ಬಿಡಿ.
ಈ ಜಾನಪದ ನೃತ್ಯ ಹಾಗೂ ವಚನ ಸಾಹಿತ್ಯ ಕಲೆಗಳ ನೃತ್ಯಗಳು ಮರೆಯಾಗುತ್ತಿರುವ ದಿನಗಳಲ್ಲಿ ಇಲ್ಲೋಂದು ಪ್ರತಿಭೆ ಅವುಗಳ ಮೇಲೆ ಮತ್ತೆ ಬೆಳಕು ಚೆಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ. ಆ ಪ್ರತಿಭೆ ಯಾರಪ್ಪ ಅಂದ್ರಾ ?
ಇವಳ ಹೆಸರು ಸಹನಾ ನಾಗೇಂದ್ರ ಬನ್ನಿಗಿಡದ ಮೂಲತಃ ಹುಬ್ಬಳ್ಳಿಯ ಅಧ್ಯಾಪಕನಗರದ ನಿವಾಸಿಯಾದ ಈ ಪ್ರತಿಭೆ.
ತನ್ನ ಕುಟುಂಬದ ಕಡು ಬಡತನದಲ್ಲಿಯೂ ಸಾಧನೆ ದಾರಿ ಬೆನ್ನಟ್ಟಿ ನೃತ್ಯ ಮಾಡುವ ಪರಿಯೂ ಎಂತಹವರನ್ನೂ ಮಂತ್ರ ಮುಗ್ದರನ್ನಾಗಿ ಮಾಡುತ್ತದೆ. ಅಷ್ಟರ ಮಟ್ಟಿಗೆ ಈ ಪ್ರತಿಭೆ ಜಾನಪದ ನೃತ್ಯ ವಚನ ನೃತ್ಯದಲ್ಲಿ ಹೆಸರು ಮಾಡಿದ್ದು ಇದರ ಜೊತೆಗೆ ಗುರು ಶ್ರೀ ವಿದುಷಿ ವನಿತಾ ಸಹಕಾರದಿಂದ ಭರತನಾಟ್ಯಕ್ಕೂ ಸೈ ಎಂದಿದ್ದಾಳೆ, ಆ ಪ್ರತಿಭೆ ಮಾತೇನು ನೀವೆ ಕೇಳಿ.
ಕೇವಲ ನೃತ್ಯವಷ್ಟೇ ಅಲ್ಲದೆ ಕಾಲೇಜು ಶ್ರೇಣಿಯಲ್ಲೂ ಮುಂಚೂಣಿಯಲ್ಲಿರುವ ಇವಳು ಬಿಬಿಎ ವಿಧ್ಯಾರ್ಥಿ.
ಅಂದಹಾಗೇ ಈ ಪ್ರತಿಭೆಯ ನೃತ್ಯಕ್ಕೆ ಮೂಲ ಯಾರಾದ್ರೂ ಒಬ್ರು ಗುರುಗಳು ಇರಬೇಕಲ್ಲ, ಅವರೇ ಈ ಪ್ರವೀಣ್ ಬಡಿಗೇರ ಹುಬ್ಬಳ್ಳಿಯ ಮೊರಾರ್ಜಿನಗರದಲ್ಲಿ ತಮ್ಮ ಸ್ನೇಹಿತ ಸಂತೋಷ ಸಾಲಿಯಾನ ಸಹಕಾರ ಜೊತೆಗೆ "ನಾಟ್ಯ ಭೈರವ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆ" ಕಟ್ಟಿದ ಇವರು ತಮ್ಮ ಗರಡಿಯಲ್ಲಿ ಪ್ರತಿಭಾವಂತ ಮಕ್ಕಳನ್ನ ರಾಜ್ಯ ಹಾಗೂ ದೇಶಕ್ಕೆ ಪರಿಚಯಿಸುತ್ತಿದ್ದಾರೆ. ಆ ಶ್ರಮದ ಹಾದಿಯ ಮಾತೇನು ಕೇಳ್ಬಿಡಿ.
ನೋಡಿ ನಾವು ನೀವೆಲ್ಲಾ ಈ ಆಧುನಿಕ ಕಾಲದ ತಳಕು ಬಳುಕಿನ ಸಾಹಿತ್ಯದ ಹಿಂದೆ ಬಿದ್ದು ನಮ್ಮದೆ ಶೈಲಿಯ ಜಾನಪದ ನೃತ್ಯ ವಚನ ಸಾಹಿತ್ಯದ ಕಲೆಗಳನ್ನ ಮರೆತಿರುವಾಗ, ಈ ಗುರು ಶಿಷ್ಯರು ಆ ಜಾನಪದ ವಚನಗಳ ನೃತ್ಯದ ಮೂಲಕವೇ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಾಧನೆಯ ಹಾದಿ ಬೆನ್ನಟ್ಟಿದ್ದಾರೆ.
ವರದಿ : ಶ್ರೀಧರ ಪೂಜಾರ
Kshetra Samachara
18/11/2020 03:37 pm