ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ರಾರಾಜಿಸುತ್ತಿವೆ ಕನ್ನಡದ ಬಾವುಟ! ಇದು ಸಿಬ್ಬಂದಿಯ ಅಪ್ಪಟ ಕನ್ನಡ ಪ್ರೇಮ

ಹುಬ್ಬಳ್ಳಿ: ಸಾಮಾನ್ಯವಾಗಿ ಬಸ್ ಎಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಸಾರಿಗೆ, ಅದರಲ್ಲಿ ಸೀಟುಗಳು, ಅಲ್ಲಲ್ಲಿ ಬೊರ್ಡ್ ಗಳು, ಅಲ್ಲದೇ ಕೇಲವು ಬಿತ್ತಿ ಚಿತ್ರಗಳನ್ನು ನಾವು ನೋಡಬಹುದು. ಕನ್ನಡ ರಾಜ್ಯೋತ್ಸವ ಹಿನ್ನೆಲೆ ನಗರದ ಸರಕಾರಿ ಬಸ್ಸುಗಳು ಕನ್ನಡದ ಕಂಪಣ ಬಿರುವ ದೃಶ್ಯಗಳು, ಎಲ್ಲಾ ಕನ್ನಡಿಗರ ಮನ ತಣಿಸಿದೆ‌‌‌‌......

ಕನ್ನಡ ಬರ್ರೀ ನಮ್ಮ ಸಂಗಡ ಎನ್ನುತಾ ನಗರದ ಗ್ರಾಮೀಣ ಸಾರಿಗೆ, ನಗರ ಸಾರಿಗೆಯ ಕೇಲವು ನಿರ್ವಾಹಕ ಮತ್ತು ಸಿಬ್ಬಂದಿಗಳು, ಕನ್ನಡ ಸಾರಿಗೆಯ ತೇರು ಎಳೆಯುತ್ತಾ ಪ್ರಯಾಣಿಕರಿಗೆ ಕನ್ನಡವ ಉಣಬಡಿಸುತ್ತಿದ್ದಾರೆ. ಗ್ರಾಮೀಣ ಘಟಕ 2ರ ತಡಸ ಗ್ರಾಮೀಣ ಸಾರಿಗೆ ಘಟಕದ ಕಂಡಕ್ಟರ್ ಶಶಿಕುಮಾರ್ ಹಾಗೂ ಡ್ರೈವರ್ ಇವರೇ ಬಸ್ಸನ್ನು ಕನ್ನಡದ ತೇರಾಗಿ ಮಾರ್ಪಾಡು ಮಾಡಿ, ಬಸ್ಸನ್ನುಯ ಕನ್ನಡಮಯ ಮಾಡಿದ್ದಾರೆ. ಬಸ್ಸಿನ ಹೊರಗಡೆ, ಮತ್ತು ಒಳಗಡೆ ಕವಿ ಸಾಹಿತಿಗಳ, ಶರಣ ಸಂತರ, ದಾರ್ಶನಿಕರ ಮತ್ತು ಹೋರಾಟ ಗಾರರ ಹಾಗೂ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು ಹಾಕಿ ಕನ್ನಡದ ಕಂಪು ಸೂಸಿದ್ದಾರೆ. ಅಲ್ಲದೆ ಎಲ್ಲಾ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಬರವಣಿಗೆ ಮೂಲಕ ಪ್ರಯಾಣಿಕರಿಗೆ ಕನ್ನಡದ ಜ್ಞಾನ ಭಂಡಾರವನ್ನೆ ತಿಳಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಯವರು ಬರೆದ ಕನ್ನಡದ ನುಡಿಮುತ್ತುಗಳಾದ, ಕವಿ ಕುವೆಂಪುರವರ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಹೀಗೆ ಇಂಥಹ ಅನೇಕರ ಬರಹಗಳು ಬಸ್ಸಿನಲ್ಲಿ ಅಂಟಿಸಿದ್ದು ಕಣ್ಣಿಗೆ ರಾರಾಜಿಸುತ್ತವೆ. ಇಡೀ ಬಸ್ಸುಗಳೇ ಕನ್ನಡದ ಕಸ್ತೂರಿಯಾಗಿ ಸೂಸುತ್ತಿದೆ‌..

ದೇವರು ಭಾವಚಿತ್ರ ಹಾಕುವ ಇಂದಿನ ದಿನದಲ್ಲಿ, ಕನ್ನಡದ ಬಗ್ಗೆ ಅಪಾರ ಅಬಿಮಾನ ಹೊಂದಿ, ಕವಿಗಳ ಭಾವಚಿತ್ರಗಳು ನೇತು ಹಾಕಿ, ಕನ್ನಡಿಗರ ಧ್ವನಿ ಪರಿಚಯಿಸಿದ್ದು ವಿಶೇಷ. ಕನ್ನಡ ನಾಡಿಗಾಗಿ ಶ್ರಮಿಸಿದ ಅನೇಕ ಮಹನಿಯರನ್ನು ಪರಿಚಯಿಸಿ ಎಲ್ಲರಲ್ಲೂ, ಕನ್ನಡ ಅಭಿಮಾನ ಉಂಟಾಗಲಿ ಎಂಬ ಸದುದ್ದೇಶದೊಂದಿಗೆ ಇಲ್ಲಿನ ಸಾರಿಗೆ ಇಲಾಖೆ ಕನ್ನಡ ತೇರು ಎಳೆಯುತ್ತಿದ್ದಾರೆ.ಒಟ್ಟಿನಲ್ಲಿ ಕನ್ನಡದ ಅಭಿವೃದ್ಧಿ ಬಗ್ಗೆ ಬಾಯಲ್ಲಿ ಮಾತನಾಡುವ ಜನರ ಮಧ್ಯೆ, ಕನ್ನಡಕ್ಕಾಗಿ ವರ್ಷಗಳಿಂದ ದುಡಿಯುತ್ತಿರುವ ವಾಯುವ್ಯ ಸಾರಿಗೆ ಸಿಬ್ಬಂದಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.....!

Edited By : Manjunath H D
Kshetra Samachara

Kshetra Samachara

01/11/2020 01:30 pm

Cinque Terre

49.02 K

Cinque Terre

15

ಸಂಬಂಧಿತ ಸುದ್ದಿ