ಕುಂದಗೋಳ : ಆ ಗ್ರಾಮದ ತುಂಬಾ ಜೈ ಜವಾನ್ ಜೈ ಕಿಸಾನ್ ಎಂಬ ಕೂಗು ಎತ್ತಿನ ಬಂಡಿಯಲ್ಲಿ ಧ್ವಜ ಹಿಡಿದು ನಿಂತ ಯೋಧ ಸುತ್ತಲೂ ಸೇರಿದ ಜಂಗುಳಿಯ ನಡುವೆ ಸತತ 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಹುಬ್ಬಳ್ಳಿಯಿಂದ ಸ್ವ ಗ್ರಾಮ ಚಾಕಲಬ್ಬಿಗೆ ಪಾದಾಯಾತ್ರೆ ಮೂಲಕ ಆಗಮಿಸಿದ ಚಂದ್ರಶೇಖರ ಬಿಚ್ಚುಗತ್ತಿಯವರಿಗೆ ಗ್ರಾಮಸ್ಥರಿಂದ ಹೂವಿನ ಸುರಿಮಳೆಯ ಮೆರವಣಿಗೆ.
ಹೌದು ! ಚಾಕಲಬ್ಬಿ ಗ್ರಾಮಕ್ಕೆ ದೇಶ ಸೇವೆ ಗೈದು ಮರಳಿದ ಯೋಧನಿಗೆ ಸುರಿಯುವ ಮಳೆಯನ್ನು ಲೆಕ್ಕಿಸದೆ ಗ್ರಾಮದ ಗುರು ಹಿರಿಯರು ಹಾಗೂ ಸ್ವಾಮಿ ವಿವೇಕಾನಂದರ ಗೆಳೆಯರ ಬಳಗದ ವತಿಯಿಂದ ಚಕ್ಕಡಿಯಲ್ಲಿ ಊರೆಲೆಲ್ಲಾ ಮೆರವಣಿಗೆ ಮಾಡಿಸಿ ಜೈ ಕಾರ ಕೂಗಿ ಭಾರತದ ಧ್ವಜ ನೀಡಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
Kshetra Samachara
12/10/2020 12:04 pm