ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪೌರ ಕಾರ್ಮಿಕ ದಿನಾಚರಣೆಗೆ ಚಾಲನೆ

ನವಲಗುಂದ : ಪಟ್ಟಣದ ಪುರಸಭೆ ಸಭಾಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಪೌರಕಾರ್ಮಿಕರೊಂದಿಗೆ ಸಸಿಗೆ ನಿರುಣಿಸುವ ಮೂಲಕ ಧಾರವಾಡ ಯೋಜನಾ ನಿರ್ದೇಶಕ ಶ್ರವಣ್ ನಾಯಕ್ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರವಣ್ ನಾಯಕ್ ಅವರು, ಪ್ರತಿದಿನ ಕಸ ತೆರವು ಮಾಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಸಾರ್ವಜನಿಕರು ಕೂಡಾ ಸ್ವಯಂಪ್ರೇರಿತರಾಗಿ "ಸ್ವಚ್ಛನಗರ ಹಾಗೂ ಕಸಮುಕ್ತ ನಗರವನ್ನಾಗಿ” ಮಾಡಲು ಸಹಕರಿಸುವಂತೆ ಮನವಿ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ವಿರೇಶ್ ಹಸಬಿ ಮಾತನಾಡಿ, ಪೌರ ಕಾರ್ಮಿಕರು ಪಟ್ಟಣದ ಜೀವನಾಡಿಗಳಾಗಿದ್ದಾರೆ. ಅಂತಹ ಸೇವಾ ನಿರತ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಕಾರದ ವತಿಯಿಂದ ಆಚರಿಸುತ್ತಾ ಬರುತ್ತಿರುವದು ಅತ್ಯಂತ ಸ್ವಾಗತಾರ್ಹ ಕಾರ್ಯವಾಗಿದೆ ಎಂದರು.

ಪುರಸಭೆಯ ಅಧ್ಯಕ್ಷ ಅಪ್ಪಣ್ಣ ಹಳ್ಳದ ಮಾತನಾಡಿ, ನಗರ ಸ್ವಚ್ಛತೆಗೆ ಪೌರಕಾರ್ಮಿಕರ ಪಾತ್ರ ಬಹು ದೊಡ್ಡದಿದೆ. ಪೌರ ಕಾರ್ಮಿಕರೆಲ್ಲರೂ ನಮ್ಮ ಸಹೋದರ, ಸಹೋದರಿಯರು ಇದ್ದ ಹಾಗೆ ಸರಕಾರ ಅವರಿಗೆ ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಪಟ್ಟಣವನ್ನು ಸ್ವಚ್ಛ ಹಾಗೂ ಕಸ ಮುಕ್ತ ನಗರವನ್ನಾಗಿ ಪ್ರಮಾಣಿಕರಿಸುತ್ತೇವೆ ಎಂದು ಸಹಿ ಮಾಡುವ ಮುಖಾಂತರ ಕಾರ್ಯಕ್ರಮ ಪ್ರಾರಂಭಿಸಿದರು. ಇದೆ ವೇಳೆ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಪದ್ಮಾವತಿ ಪೂಜಾರ, ಸುರೇಶ್ ಮೇಟಿ. ಪೌರ ಕಾರ್ಮಿಕರ ನೌಕರರ ಸಂಘದ ಅದ್ಯಕ್ಷ ಬಸವರಾಜ್ ರಾಮಗಿರಿ, ಉಪಾಧ್ಯಕ್ಷ ಪ್ರವೀಣ್ ಅಗಸಿಮನಿ ಸೇರಿದಂತೆ ಪುರಸಭೆ ಎಲ್ಲ ಕಾರ್ಮಿಕರು ಪುರಸಭೆಯ ಸದಸ್ಯರು, ಆಶ್ರಯ ಸಮಿತಿಯ ಸದಸ್ಯರು. ಸಿಬ್ಬಂದಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/09/2022 07:18 pm

Cinque Terre

19.47 K

Cinque Terre

0

ಸಂಬಂಧಿತ ಸುದ್ದಿ