ನವಲಗುಂದ : ಸ್ವಾತಂತ್ರ್ಯೋತ್ಸವದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕ ಪ್ರಶಸ್ತಿ ಪುರಸ್ಕಾರಕ್ಕೆ ಈ ಬಾರಿ ಧಾರವಾಡ ಜಿಲ್ಲೆಯ ನವಲಗುಂದದ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ದೃವರಾಜ ಬಿ ಪಾಟೀಲ ಅವರು ಭಾಜನಾರಾಗಿದ್ದಾರೆ.
ಸುದೀರ್ಘ ಕಾಲ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆ ಪರಿಗಣಿಸಿ, ನವಲಗುಂದ ಜನ ಸ್ನೇಹಿ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೃವರಾಜ ಬಿ ಪಾಟೀಲ ಅವರಿಗೆ ರಾಷ್ಟ್ರಪತಿ ಪದಕ ಒಲಿದಿದೆ.
ಮೂಲತಃ ಬಾಗಲಕೋಟ ಜಿಲ್ಲೆಯವರಾದ ಡಿ.ಬಿ ಪಾಟೀಲ್, ಗದಗ ಜಿಲ್ಲೆಯ ಮುಂಡರಗಿ, ರೋಣ ಹಾಗೂ ನರಗುಂದದಲ್ಲಿ ಸೇವೆ ಸಲ್ಲಿಸಿದ್ದು, ಸದ್ಯ ನವಲಗುಂದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದೇಶದ ಅತ್ಯುನ್ನತ ರಾಷ್ಟ್ರಪತಿ ಪದಕ ದೊರತ ಹಿನ್ನೆಲೆ ಧಾರವಾಡ ಜಿಲ್ಲೆಯ ಎಸ್ಪಿ ಜೆ.ಲೋಕೇಶ್, ಡಿವೈಎಸ್ಪಿ ಎಮ್.ಎಸ್ ಸಂಕದ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Kshetra Samachara
14/08/2022 07:30 pm