ನವಲಗುಂದ: ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಸಭಾಂಗಣದಲ್ಲಿ ಶಿವಶರಣ ನೂಲಿ ಚಂದಯ್ಯನವರ 915ನೇ ಜಯಂತಿಯನ್ನು ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಅನೀಲ ಬಡಿಗೇರ ಅವರ ನೇತೃತ್ವದಲ್ಲಿ ಭಜಂತ್ರಿ ಸಮಾಜದ ಎಲ್ಲಾ ಬಂಧು ಭಗಿನಿಯರೊಂದಿಗೆ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿಬ್ಬಂದಿ ಹಾಗೂ ಭಜಂತ್ರಿ ಸಮಾಜದ ಅಧ್ಯಕ್ಷರು ರವಿ ಭಜಂತ್ರಿ, ಜೊತೆಗೆ ಸುರೇಶ ಭಜಂತ್ರಿ, ಕರಿಯಪ್ಪ ಭಜಂತ್ರಿ, ಪುರಸಭೆ ಸದಸ್ಯರಾದ ನಾಗರಾಜ ಭಜಂತ್ರಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಮಾಜದ ವತಿಯಿಂದ ಉಪಹಾರ ಮಾಡಿಸಲಾಗಿತ್ತು.
Kshetra Samachara
12/08/2022 06:12 pm