ನವಲಗುಂದ : ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನವಲಗುಂದ ನ್ಯಾಯಾಲಯ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಶ್ರೀ ಗವಿಮಠದ ದಾಸೋಹ ಭವನದವರೆಗೆ ಮೆರವಣಿಗೆ ಮೂಲಕ ತೆರಳಲಾಯಿತು.
ಇನ್ನು ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಕಟ್ಟಡ ಹಾಗೂ ಇತರೆ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡ ಮೆರವಣಿಗೆಗೆ ಹಿರಿಯ ದಿವಾಣಿ ನ್ಯಾಯಾಧೀಶರಾದ ಡಿ ಮಂಜುನಾಥ ಅವರು ಚಾಲನೆ ನೀಡಿದ್ದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ವಿ ಪಿ ಪಾಟೀಲ್, ಕಾರ್ಮಿಕ ಇಲಾಖೆ ಹಿರಿಯ ನೀರಿಕ್ಷಕ ಮಹಮ್ಮದ್ ಅಕ್ರಮ ಹುಸೇನಮಿಯಾ ಅಲ್ಲಾಪುರ, ಕಾರ್ಮಿಕ ಸಂಘದ ಅಧ್ಯಕ್ಷ ಲಕ್ಷಣ ಗುಡಾರದ, ಕಾರ್ಮಿಕ ಇಲಾಖೆಯ ಸಿಬ್ಬಂದಿ ಪೂರ್ಣಿಮಾ ಆಚಾರಿ, ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಬಸಲಿಂಗಯ್ಯ ಪೂಜಾರ್, ನಿಂಗಪ್ಪ ದೊಡ್ಡಮನಿ, ಮಹಮ್ಮದ್ ಮಕಾಂದರ, ಮಲ್ಲಪ್ಪ ಹೆಬಸೂರ, ಬಾಬಾಜಾನ್ ಹಳ್ಳಿಕೇರಿ, ಚಂದುಸಾಬ್ ಮಕಾಂದರ ಇತರರು ಉಪಸ್ಥಿತರಿದ್ದರು.
Kshetra Samachara
01/05/2022 07:54 pm