ಹುಬ್ಬಳ್ಳಿ: ಕೊಟಗೊಂಡಹುಣಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಎಚ್‌ಡಿಎಂಸಿ ಅಧ್ಯಕ್ಷ ಶಂಕರಗೌಡ ಹೊನ್ನಪ್ಪಗೌಡ್ರ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, 'ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆ ಮತ್ತು ಹಿರಿಮೆ ಅಪಾರವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ಹಾಗೂ ಅದರ ಅಂಶಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಲ್ಲಿನ ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆಯ ಜೊತೆಗೆ ಸಂವಿಧಾನದ ಮೇಲೆ ನಂಬಿಕೆಯೊಂದಿಗೆ ಪರಸ್ಪರ ಸಾಮರಸ್ಯ ಹಾಗೂ ಸೌಹಾರ್ಧತೆ ಬದುಕುವ ಮೂಲಕ ದೇಶದ ಗೌರವ ಎತ್ತಿಹಿಡಿಯಬೇಕು ಎಂದರು.
ಈ ಸಂದರ್ಭದಲ್ಲಿ ಎಚ್‌ಡಿಎಂಸಿ ಉಪಾಧ್ಯಕ್ಷ ಪದ್ಮಾವತಿ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರಾದ ಯಲ್ಲಪ್ಪಗೌಡ್ರ ಸಣ್ಣಪರ್ವತಗೌಡ್ರ, ಮುಕ್ತಮಸಾಬ ಬಡಿಗೇರ, ದಿವಾನಸಾಬ್ ಕಮಾಲಸಾಬನವರ, ಹೊನ್ನಪ್ಪ ಸೋಲಾರಗೊಪ್ಪ, ಶೀತಲ್ ಅ ಬಿಜವಾಡ, ನಿಂಗಪ್ಪ ಯಲಿವಾಳ, ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಎಮ್.ಹಗೇದ್, ಶಿಕ್ಷಕರಾದ ಜೆ.ಎನ್.ಕಳ್ಳಿಮನಿ, ಎಂ.ಎಸ್.ಪಟವರ್ಧನ, ಎಸ್.ಎಸ್.ಮಿಕಲಿ ಇದ್ದರು.
Kshetra Samachara
26/01/2022 01:31 pm