ನವಲಗುಂದ : ನವಲಗುಂದ ತಾಲೂಕಾ ಆಡಳಿತದ ವತಿಯಿಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಆವರಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಮಾತನಾಡಿ, ನಾಡಿನ ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ನೀಡಿ, ಅವರೆಲ್ಲರ ರಕ್ಷಣೆಗಾಗಿ ಸಂವಿಧಾನವನ್ನು ಜಾರಿಗೆ ತಂದ ದಿನವಿದು. ಆ ಆಶಯದಂತೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಮತ್ತಷ್ಟು ಬೆಳಗಲಿ, ಎಲ್ಲ ರಂಗಗಳಲ್ಲೂ ದೇಶದ ಕೀರ್ತಿ ಪತಾಕೆ ಹಾರಲಿ ಎಂದರು.
ಈ ಸಂದರ್ಭದಲ್ಲಿ ನವಲಗುಂದ ತಾಲೂಕಾ ದಂಡಧಿಕಾರಿಗಳು ಪ್ರವೀಣ್ ಹುಚ್ಚಣ್ಣವರ, ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ, ಉಪಾಧ್ಯಕ್ಷ ನಾಶಿಪುಡಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎ ಬಿ ಕೊಪ್ಪದ, ಪಿಎಸ್ಐ ಬೆನ್ನೂರ್ ಸೇರಿದಂತೆ ಹಲವರು ಇದ್ದರು.
Kshetra Samachara
26/01/2022 03:03 pm