ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದ ಎಸ್. ಎ. ಪಟ್ನಿ

ನವಲಗುಂದ: ತಾಲೂಕಿನ ಗುಮ್ಮಗೋಳ ಗ್ರಾಮದ ಸಮುದಾಯ ಭವನದಲ್ಲಿ 75ನೇ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿದ ವಕೀಲ ಎಸ್.ಎ. ಪಟ್ನಿ ಅವರು ಮಾತನಾಡಿ, ನಿಮ್ಮ ವಾಹನಗಳಿಗೆ ವಿಮೆ ಮಾಡಿಸಿವುದರಿಂದ ಅನಿರೀಕ್ಷಿತ ಅಪಾಯಗಳಿಂದ ಉಂಟಾದ ನಷ್ಟ, ಹಾನಿಯ ವಿರುದ್ಧ ನಿಮ್ಮ ವಾಹನಕ್ಕೆ ರಕ್ಷಣೆ ನೀಡುತ್ತದೆ. ಇದು ಅಪಘಾತಗಳು, ಕಳ್ಳತನಗಳು ಅಥವಾ ನೈಸರ್ಗಿಕ, ಮಾನವ ನಿರ್ಮಿತ ವಿಪತ್ತುಗಳಿಂದ ಉಂಟಾಗಬಹುದಾದ ಹಣಕಾಸಿನ ನಷ್ಟವನ್ನು ಪರಿಹರಿಸುವಲ್ಲಿ ಸಹಕಾರಿ. ವಿಮೆ ಪಡೆಯುವಲ್ಲಿ ವಿಮೆ ರಿನ್ಯೂವಲ್ ಇರಬೇಕು. ಇಲ್ಲದೆ ಇದ್ದರೆ ವಿಮೆ ಪಡೆಯುವುದು ಕಷ್ಟ, ಮೋಟಾರು ವಾಹನ ಕಾಯ್ದೆ ಪ್ರಕಾರ ಮೋಟಾರು ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನುಬದ್ಧ ಅಪರಾಧ ಎಂದು ಆದೇಶಿಸಿದೆ ಹಾಗಾಗಿ ವಾಹನಗಳಿಗೆ ವಿಮೆ ಮಾಡಿಸಿ ಹಾಗೂ ಅದರಿಂದ ಅನೇಕ ಉಪಯೋಗ ಕುರಿತು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

08/11/2021 08:20 pm

Cinque Terre

6.67 K

Cinque Terre

0

ಸಂಬಂಧಿತ ಸುದ್ದಿ