ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಹೆಸರುಕಾಳು ಖರೀದಿ ಕೇಂದ್ರ ಉದ್ಘಾಟಿಸಿದ ಸಚಿವ ಮುನೇನಕೊಪ್ಪ

ಹುಬ್ಬಳ್ಳಿ : ತಾಲೂಕಿನ ಹೆಬಸೂರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಪ್ರತಿ ಕ್ವಿಂಟಾಲಿಗೆ ರೂ.7275/- ನಂತೆ ಖರೀದಿ ಕೇಂದ್ರವನ್ನು ಕೈಮಗ್ಗ ಮತ್ತು ಸಕ್ಕರೆ ಖಾತೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಈಗಾಗಲೇ 16 ಖರೀದಿ ಕೇಂದ್ರಗಳನ್ನ ಮಾಡಲಾಗಿದ್ದು, 90 ದಿನಗಳ ವರೆಗೆ ರೈತರಿಂದ ಖರೀದಿ ನಡೆಯಲಿದೆ. ಕಳೆದ ಬಾರಿಯ ಸಮಯದಲ್ಲಿ ಹೆಚ್ಚುವರಿ ದಿನಗಳನ್ನ ಮಾಡಿ ಖರೀದಿ ಮಾಡಲಾಗುತ್ತಿದೆ. ರೈತ ಬೆಳೆದ ಬೆಳೆಗೆ ಮುಕ್ತ ಮಾರುಕಟ್ಟೆ ಒದಗಿಸಲು ಸರಕಾರ ಮುಂದಾಗಿದೆ. ರೈತರಿಗೆ ಸೆಸ್ ಕೊಡಬೇಕಾದ ಅವಶ್ಯಕತೆ ಬರೋದಿಲ್ಲ. ಖರೀದಿ ಕೇಂದ್ರದ ಉಪಯೋಗವನ್ನ ಪ್ರತಿ ರೈತರು ಪಡೆದುಕೊಳ್ಳಬೇಕು. ಖರೀದಿ ಕೇಂದ್ರದಲ್ಲಿ ನಿಗದಿತ ಖರೀದಿಗಿಂತ ಹೆಚ್ಚುವರಿ ಖರೀದಿ ಮಾಡುವಂತೆ ಕೆಲವೆಡೆ ರೈತರು ಕೇಳಿಕೊಂಡಿದ್ದು, ಈ ಬಗ್ಗೆ ಸರಕಾರದಲ್ಲಿ ಮಾತುಕತೆ ನಡೆಸಲಾಗುವುದೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಈ ಸಂದರ್ಭದಲ್ಲಿ ಅಶೋಕ‌ ಮಂಡಿಗನಾಳ, ಸೊಸಾಯಿಟಿ ಅಧ್ಯಕ್ಷ ಪಕ್ಕೀರೆಡ್ಡಿ ಹೊಸಮನಿ, ಗೋಪಣ್ಣ ನಲವಡಿ, ರಾಜು ಗೌಡರ, ಗ್ರಾ.ಪಂ ಅಧ್ಯಕ್ಷ, ಶಿವಾನಂದ ಬೊಮ್ಮಣ್ಣವರ, ಶಿವಾನಂದ ಲದ್ದಿ, ಕಲ್ಲಪ್ಪ ಉಳ್ಳಾಗಡ್ಡಿ, ಪಿ.ಕೆ.ಕುರಡಗಿ, ಸಿದ್ಧಣ್ಣಗೌಡ ಪಾಟೀಲ, ಮುತ್ತು ಚಾಕಲಬ್ಬಿ, ಸುರೇಶ ಬಣವಿ, ರಮೇಶ ನೀರಲಗಿ, ಚಿದಾನಂದ ಕುರ್ತಕೋಟಿ, ಕಲ್ಲಪ್ಪ ಗಿಡ್ನನವರ, ಮುತ್ತು ಗಾಳಪ್ಪನವರ ಸೇರಿದಂತೆ ಹೆಬಸೂರ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/09/2021 12:46 pm

Cinque Terre

11 K

Cinque Terre

0

ಸಂಬಂಧಿತ ಸುದ್ದಿ