ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮದ ಮಕನಾದ ಮಾಲಿಂಗಶಾವಲಿ ಬಾಬಾರವರು ನಿನ್ನೆ ಸಾಯಂಕಾಲ ಐದು ಗಂಟೇಗೆ ನಿಧನರಾಗಿದ್ದು, ಮೃತರ ಅಂತ್ಯಕ್ರಿಯೆಯನ್ನು ಹಿಂದು-ಮುಸ್ಲೀಂ ಧರ್ಮದವರು ಒಂದಾಗಿ ಇಂದು ನೆರವೇರಿಸಿದರು.
ಅಂತ್ಯಕ್ರಿಯೆಯಲ್ಲಿ ಶಿರಹಟ್ಟಿ ಸಂಸ್ಥಾನ ಮಠದ ಪಕೀರ ಸಿದ್ಧರಾಮ ಮಹಾಸ್ವಾಮಿಗಳು ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು, ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಮಹಾಸ್ವಾಮಿಗಳು ಅಂತಿಮ ದರ್ಶನ ಪಡೆದ ಬಳಿಕ ಪಾರ್ಥಿವ ಶರೀರವನ್ನು ಹಿರೇಹರಕುಣಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿ ಬಳಿಕ ಮಕನಾಕೆ ತಂದು ಹಿಂದೂ ಮುಸ್ಲಿಂ ಸಂಪ್ರದಾಯದಂತೆ ವಿಧಿ ವಿಧಾನ ನೇರವೆರಿಸಿ ಅಂತ್ಯಕ್ರಿಯೆ ನಡೆಯಿತು.
ಮೂಲ ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಗ್ರಾಮದವರಾದ ಮಾಲಿಂಗಶಾವಲಿ ಬಾಬಾರವರು 20 ವರ್ಷಗಳಿಂದ ಮಕನಾದ ಬಾಬಾರವರಾಗಿದ್ದು ಪ್ರತಿ ವರ್ಷ ಹಿರೇಹರಕುಣಿ ಗ್ರಾಮದಲ್ಲಿ ದರಗಾ ಉರುಸು ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಲೋಕೊದ್ದಾರದ ಮಹತ್ವ ಕೈಗೊಂಡಿದ್ದರು.
ಹಿಂದೂ ಮುಸ್ಲಿಂ ಎಲ್ಲರೂ ಸಮಾನರೆಂಬ ಬಾಬಾರವರು ಲಿಂಗದೀಕ್ಷೆ ಸಹ ಪಡೆದ ಸ್ವಾಮಿಗಳು ವಿಶಿಷ್ಟವಾದ ಕೇಶ ಹೊಂದಿದ್ದರು.
ಕಳೆದ ಒಂದು ತಿಂಗಳ ಹಿಂದೆ ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಬಾಬಾರವರು ನಂತರದಲ್ಲಿ ತಮ್ಮ ಸ್ವ ಗ್ರಾಮಕ್ಕೆ ಮರಳಿ ಕುಟುಂಬದವರನ್ನು ಬೇಟಿ ಮಾಡಿ ಮಕನಾಕೆ ಆಗಮಿಸಿ ತಮ್ಮ ನಿಧನದ ನಂತರದಲ್ಲಿ ಮಕನಾದ ಮುಂದೆ ತಮ್ಮನ್ನು ದಪನ ಮಾಡುವಂತೆ ಭಕ್ತರಿಗೆ ತಿಳಿಸಿ ಕೆಲ ಹೊತ್ತಿನ ಬಳಿಕ ಮಕನಾದ ಒಳಗೆ ಇಹಲೋಕ ತ್ಯಜಿಸಿ ಸಾವಿನಲ್ಲೂ ಪವಾಡ ಮಾಡಿದ್ದಾರೆ.
Kshetra Samachara
23/09/2020 08:59 pm