ಕಲಘಟಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೋಳ್ಳಿ ಬಣ ಸಂಘಟನೆಯ ಕಲಘಟಗಿ ತಾಲೂಕು ಸಮಿತಿ ಪುನಃ ರಚನೆ ಮಾಡಲಾಯಿತು.
ಕಲಘಟಗಿ ತಾಲೂಕು ಅಧ್ಯಕ್ಷರಾಗಿ ಶರೀಫ್ ಹರಿಜನ,ಉಪಾಧ್ಯಕ್ಷರಾಗಿ ಪರಶುರಾಮ ಮಾದರ,ಪ್ರಶಾಂತ್ ಹಂಚಿನಮನಿ,ದುರ್ಗಪ್ಪ ಮಾದರ,ಕಾರ್ಯಾಧ್ಯಕ್ಷರಾಗಿ ಸಹದೇವ ನಡುವಿನಮನಿ,ಗೌರವ ಅಧ್ಯಕ್ಷರಾಗಿ ಅಣ್ಣಪ್ಪ ಮಾದರ,ಕೋಶಾಧ್ಯಕ್ಷರಾಗಿ ಬಾಳೇಶ ಬಿದರಳ್ಳಿ, ಖಜಾಂಚಿಯಾಗಿ ರಾಘವೇಂದ್ರ ಅರಳಿಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಬಿದರಳ್ಳಿ,ಸಹ ಕಾರ್ಯದರ್ಶಿಯಾಗಿ ಮಾಂತೇಶ ಮಾಳಗಿ,ಸಂಘಟನಾ ಕಾರ್ಯದರ್ಶಿಯಾಗಿ ಸಂಗಮೇಶ ಹರಿಜನ, ಬಸವರಾಜ ಹರಿಜನ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಚಂದ್ರಕಾಂತ ಕಾದ್ರೊಳ್ಳಿ,ಯುವ ಘಟಕ ಅಧ್ಯಕ್ಷಮಂಜುನಾಥ್ ದೊಡ್ಡಮನಿ,ಯುವ ಘಟಕ ಜಿಲ್ಲಾಧ್ಯಕ್ಷ ಶರಣಪ್ಪ ಹೊಸಮನಿ ಉಪಸ್ಥಿತರಿದ್ದರು.
Kshetra Samachara
01/10/2020 11:54 am