ನವಲಗುಂದ : ನವಲಗುಂದ ಪಟ್ಟಣದ ಶ್ರೀ ಜಗದ್ಗುರು ಅಜಾತ ನಾಗಲಿಂಗಸ್ವಾಮಿ ಪ್ರೌಢ ಶಾಲೆಯಲ್ಲಿ ವಿದ್ಯಾಪೀಠದ 2021 22 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ 100% ರಷ್ಟು ಆದ ಪ್ರಯುಕ್ತ ಶಿಕ್ಷಕರಿಗೆ ಸ್ವರ್ಣ ಪದಕ ನೀಡಿ ಸನ್ಮಾಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಸಾನಿಧ್ಯವನ್ನು ಶ್ರೀ ಎಚ್ರೇಶ್ವರ ಮಠದ ಎಚ್ರೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿ, ಶ್ರೀ ಜಗದ್ಗುರು ಅಜಾತನಾಗಲಿಂಗಸ್ವಾಮಿ ಮಠದ ಶ್ರೀ ವೀರೇಂದ್ರ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಹಶೀಲ್ದಾರ್ ಅನಿಲ್ ಬಡಿಗೇರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಕೋರಿ, ಶಿಕ್ಷಕರು ಹೊಸ ಆಯಾಮಕ್ಕೆ ತಕ್ಕಂತೆ ಬೋಧನಾ ಕೌಶಲ್ಯವನ್ನು ರೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎ.ಎನ್ ಬಡಿಗೇರ, ಮಲ್ಲಿಕಾರ್ಜುನ್ ಪವಾಡ ಶೆಟ್ಟರ್, ಮಲ್ಲಿಕಾರ್ಜುನ್ ವಗ್ಗರ್ ಶಾಲೆಯ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು , ಗಣ್ಯರು ಉಪಸ್ಥಿತರಿದ್ದರು.
Kshetra Samachara
05/09/2022 01:15 pm