ಧಾರವಾಡ : 2021-22 ನೆಯ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ತಾಲೂಕಿನ ಗರಗ ಗ್ರಾಮದ ಕುಮಾರಿ ಸಹನಾ ಚ ಅಂಗಡಿ, ಶಿಶುವಿನಹಳ್ಳಿಯ ಕಾಂತೇಶರಡ್ಡಿ ಕಿರೇಸೂರ, ಹೆಬ್ಬಳ್ಳಿ ಗ್ರಾಮದ ಅನ್ನಪೂರ್ಣ ಸಂಶಿ, ತನುಶ್ರಿ ಬನ್ನಿಗಿಡದ, ಕವಿತಾ ಹುಬ್ಬಳ್ಳಿ, ರಮಜಾನಬಿ ದಸ್ತಗೀರ ಇವರುಗಳಿಗೆ ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ಹೆಬ್ಬಳ್ಳಿಯ ಆಶ್ರಯದಲ್ಲಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಇದೊಂದು ಅವಿಸ್ಮರಣೀಯ ಕಾರ್ಯಕ್ರಮ ಎಸೆಸೆಲ್ಸಿಯಲ್ಲಿ 625ಕ್ಕೆ 620 ಅಂಕಗಳನ್ನು ಧಾರವಾಡ ತಾಲೂಕಿನ ಮಕ್ಕಳು ಗಳಿಸಿರುವುದು ಅತ್ಯಂತ ದೊಡ್ಡ ಸಾಧನೆಯಾಗಿದೆ. ನಿಮ್ಮ ಸಾಧನೆಯನ್ನು ಗುರುತಿಸಿ, ನಿಮ್ಮ ಮುಂದಿನ ಶಿಕ್ಷಣ ಉಜ್ವಲವಾಗಲಿ ಎನ್ನುವ ಸದುದ್ದೇಶದಿಂದ ಹೆಬ್ಬಳ್ಳಿಯ ಬ್ರಹ್ಮಪುರಿ ಸಾಂಸ್ಕೃತಿಕ ಬಳಗ ನಿಮಗೆ ಗೌರವಿಸಿ, ಹಾರೈಸಿರುವುದು ಈ ಬಳಗದ ಶೈಕ್ಷಣಿಕ ಕಳಕಳಿಯನ್ನು ಎತ್ತಿ ತೋರಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಅಕ್ಷರತಾಯಿ ಲೂಸಿ ಸಾಲ್ಡಾನ ಇಪ್ಪತ್ತು ಸಾವಿರ ದತ್ತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಜನತಾ ಪ್ಲಾಟ ಹೆಬ್ಬಳ್ಳಿ ಶಾಲೆಗೆ ನೀಡಿದರು.
ಈ ಸಂಧರ್ಭದಲ್ಲಿ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರಾದ ಇಮಾಮಸಾಬ ಕೊಣ್ಣೂರ, ಅಕ್ಷರತಾಯಿ ಲೂಸಿ ಸಾಲ್ಡಾನ, ಮಂಜುನಾಥ ವಾಸಂಬಿ, ನಿಂಗಪ್ಪ ಮೊರಬದ, ಸುಮಂಗಲಾ ಕೌದೆಣ್ಣವರ, ಎಲ್ ಐ ಲಕ್ಕಮ್ಮನವರ, ಮಲ್ಲಿಕಾರ್ಜುನ ಉಪ್ಪಿನ, ಎಂ ಆರ್ ಪಾಲ್ತಿ, ರಾಜೀವ ಹಲವಾಯಿ, ಮುಖ್ಯ ಶಿಕ್ಷಕಿ ಗೀತಾ ದೊಡಮನಿ, ರಾಮು ಭಜಂತ್ರಿ, ವಿಜಯ ಅಣ್ಣಿಗೇರಿ, ಸಂಜು ಮೊರಬದ, ನಿಂಗಪ್ಪ ಹೊಂಗಲ, ಅಮಿನಸಾಬ ದೊಡಮನಿ, ನಿರ್ಮಲ ದೇಸಾಯಿ, ರಜಿಯಾಬಾನು ಕೊಣ್ಣೂರ, ಬಸವರಾಜ ಮೂಗಪ್ಪ ಶಿವಳ್ಳಿ, ಭಕ್ಷು ದಸ್ತಗೀರ, ಎಸ್ ಎಸ್ ಸಾಂಬ್ರಾಣಿ, ಚಂಪಾ ನರೇಗಲ್, ಸಿ ಡಿ ಬುಯ್ಯಾರ, ರಾಜೇಶ್ವರಿ ಕೊಡಬಾಳ, ಎಸ್ ಆರ್ ದೇಸಾಯಿ, ಎಸ್ ಎಸ್ ದಳವಾಯಿ, ಮುಂತಾದವರು ಇದ್ದರು.
Kshetra Samachara
23/05/2022 09:54 pm