ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗುತ್ತಿದ್ದಾರೆ. ಅವರಲ್ಲಿ ವೃತ್ತಿಪರ ಕೌಶ್ಯಲಗಳು ಕುಂಠಿತವಾಗುತ್ತಿವೆ. ಈ ನಿಟ್ಟಿನಲ್ಲಿ ಇಲ್ಲೊಂದು ಶಾಲೆ ಮಕ್ಕಳಿಗೆ ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದು, ಇತರ ಶಾಲೆಗಳಿಗೆ ಮಾದರಿಯಾಗಿದೆ.
ಹೌದು. ಹೀಗೆ ಕೈಗೆ ಮೆಹಂದಿ ಹೆಚ್ಚುತ್ತಿರುವ ವಿದ್ಯಾರ್ಥಿಗಳು. ಮತ್ತೊಂದೆಡೆ ಆಲ್ಟ್ ಆ್ಯಂಡ್ ಕ್ರಾಪ್ ಮಾಡುತ್ತಿರುವ ವಿದ್ಯಾರ್ಥಿಗಳು. ಇಂತಹ ಸುಂದರ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ಜೆಎಸ್ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯಲ್ಲಿ. ಸರಕಾರ ವಿದ್ಯಾರ್ಥಿಗಳಲ್ಲಿ ತಮಗೆ ಇಷ್ಟವಾದ ವಿಷಯಗಳನ್ನು ಕಲಿಯಬೇಕು ಎಂಬ ದೃಷ್ಟಿಯಿಂದ, ಪ್ರಸಕ್ತ ವರ್ಷದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಿದೆ. ಈಗಾಗಲೇ ಕೆಲವೊಂದು ವಿಶ್ವ ವಿದ್ಯಾಲಯಗಳು ಈ ನೀತಿಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಅದರಂತೆ ಹುಬ್ಬಳ್ಳಿ ಉಣಕಲ್‌ನಲ್ಲಿರುವ ಜೆಎಸ್ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆ ಕೂಡ, ಕಾಲೇಜು ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳು ಬಹುಬೇಗ ಎನ್‌ಇಪಿಗೆ ಹೊಂದಿಕೊಳ್ಳಲು ಸುಲಭವಾಗಲೆಂದು ಮಕ್ಕಳಿಗೆ ಹತ್ತು ದಿನಗಳ ಎನ್‌ಇಪಿ ತರಬೇತಿಯನ್ನು ಆಯೋಜನೆ ಮಾಡಿ ಮಕ್ಕಳಲ್ಲಿ ಉತ್ಸಾಹ ಮೂಡಿಸಿದೆ.
ಈ ಚಟುವಟಿಕೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿ, ವೆಬ್ ಡಿಸೈನಿಂಗ್, ಡಿಟಿಪಿ, ಗಾರ್ಡನಿಂಗ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಬ್ಯೂಟಿಷಿಯಮ್, ಆಲ್ಟ್ ಮತ್ತು ಕ್ರಾಪ್ ಮೆಹಂದಿ ಸೇರಿದಂತೆ, ಹತ್ತು ಹಲವು ವಿಷಯಗಳಲ್ಲಿ ತಮಗೆ ಆಸಕ್ತಿದಾಯಕ ತರಬೇತಿಯಲ್ಲಿ ಪಾಲ್ಗೊಂಡು ಆಧುನಿಕತೆಯ ಶಿಕ್ಷಣವನ್ನು ಪಡೆದುಕೊಂಡರು.
ಒಟ್ಟಿನಲ್ಲಿ ಮೊದಲೇ ಕೊರೊನಾದಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಂಠಿತಗೊಂಡಿದ್ದು, ಇಂತಹ ತರಬೇತಿ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಮೂಡಿಸಿದ್ದು ಸುಳಲ್ಲ.
Kshetra Samachara
14/04/2022 06:47 pm