ಕುಂದಗೋಳ : ದೊಡ್ಡಾಟದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೂಡಲಪಾಯ ಬಯಲಾಟ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮತ್ತೊಂದು ಪ್ರಯೋಗಕ್ಕೆ ಮುಂದಾಗಿ ಶಾಲಾ ಕಾಲೇಜು ಮಕ್ಕಳಿಗೆ ದೊಡ್ಡಾಟದ ಕಲಿಕಾ ರುಚಿಯನ್ನು ತರಬೇತಿ ನೀಡುತ್ತಿದೆ.
ಹೌದು ! ದೊಡ್ಡಾಟದ ನುರಿತ ಕಲಾವಿದರಾದ ರಾಜಶೇಖರ ಮಾಳವಾಡ, ಬಸವರಾಜ ಕರಿಮಲ್ಲಣ್ಣನವರ, ಡಿ.ವಿ.ಪಾಟೀಲ ಹಾಗೂ ಮಾಣಿಕ್ಯ ಚಿಲ್ಲೂರ, ಮಧು ಮಾನೆ, ಶಾಂಭವಿ ಬಡಿಗೇರ್, ಕುಂದಗೋಳ ತಾಲೂಕಿನ ಶಾಲಾ ಕಾಲೇಜು ಮಕ್ಕಳಿಗೆ ದೊಡ್ಡಾಟವನ್ನು ಹೇಳಿ ಕೊಡುತ್ತಿದ್ದಾರೆ.
ಮಕ್ಕಳು ಅಷ್ಟೇ ಆಸಕ್ತಿಯಿಂದ ದೊಡ್ಡಾಟ ಕಲಿಯುತ್ತಿದ್ದು, ಈಗಾಗಲೇ ಸರ್ಕಾರಿ ಪದವಿ ಪೂರ್ವ ಕಾಲೇಜು, ಇಂಗಳಗಿ ಸರ್ಕಾರಿ ಶಾಲೆ ಮಕ್ಕಳಿಗೆ ತರಬೇತಿ ಆರಂಭವಾಗಿದ್ದು, ಅದರಂತೆ ಕುಂದಗೋಳ ಹಾಗೂ ಸುತ್ತ ಮುತ್ತಲಿನ ಹಳ್ಳಿಯ ಮಕ್ಕಳಿಗೆ ದೊಡ್ಡಾಟದ ಸವಿಯನ್ನು ಕಲಿಸುತ್ತಿದ್ದಾರೆ.
Kshetra Samachara
04/03/2022 07:19 pm