ಕಲಘಟಗಿ: ಪಟ್ಟಣದ ವಿದ್ಯಾರ್ಥಿನಿ ಸಾನಿಯಾ ಗುಡಗುಂಟಿ ಪ್ರಧಾನ ಮಂತ್ರಿ ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಸಿ ಸಾಧನೆ ಮಾಡಿದ್ದು, ಇವಳನ್ನು ತಾಲೂಕಾ ಪಂಚಾಯಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಸರಕಾರಿ ಆದರ್ಶ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಸಾನಿಯ ಗುಡಗುಂಟಿ ಇವಳು ದೆಹಲಿಯಲ್ಲಿ ಜನವರಿ 16 , 2020 ರಲ್ಲಿ ಜರುಗಿದ ಪ್ರಧಾನ ಮಂತ್ರಿ ಪರೀಕ್ಷಾ ಪೇ ಚರ್ಚಾದಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿ ಸಾಧನೆ ಮಾಡಿದ್ದನ್ನು ಗುರುತಿಸಿ ಸನ್ಮಾನಿಸಲಾಯಿತು.
ತಾ ಪಂ ಅಧ್ಯಕ್ಷೆ ಸುನೀತಾ ಮೇಲಿನಮನಿ,ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಈರಯ್ಯ ಸಿದ್ಧಾಪುರಮಠ,ತಾ ಪಂ ಇ ಒ ಎಂ ಎಸ್ ಮೇಟಿ,ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯದ ವ್ಯವಸ್ಥಾಪಕ ಬೊಮ್ಮನಾಳ ಹಾಗೂ ತಾ ಪಂ ಸದಸ್ಯರು ಉಪಸ್ಥಿತರಿದ್ದರು.
Kshetra Samachara
05/02/2021 04:24 pm