ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸುತ್ತಗಟ್ಟಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಲರವ

ಹಳ್ಳಿ ಸೊಗಡಿನ ಬಗೆ ಬಗೆಯ ಖಾದ್ಯಗಳು, ಸಂಪ್ರದಾಯ ಉಡುಗೆಯಲ್ಲಿ ಖುಷಿಯ ಸಂಭ್ರಮ. ಚಿನ್ನರ ಮೊಗದಲ್ಲೂ ಹೊಸತನದ ಅನುಭವ. ಶಾಲೆಯ ಆವರಣದ ತುಂಬೆಲ್ಲಾ ಇಳಕಲ್ ಸೀರೆ ತೊಟ್ಟು ಹೆಣ್ಣು ಮಕ್ಕಳ ಖುಷಿ, ಧೋತರ ಉದ್ದನೆಯ ನಿಲುವಂಗಿ ತೊಟ್ಟು ಹುಡುಗರ ಮಸ್ತಿ, ಸದಾ ಆಟ-ಪಾಠ, ತುಂಟಾಟಗಳಿಗೆ ಸಾಕ್ಷಿಯಾಗುತ್ತಿದ್ದ ಶಾಲೆಯಲ್ಲಿ ಇವತ್ತು ಹಳ್ಳಿಯ ಲೋಕವೇ ತೆರೆದುಕೊಂಡಿತ್ತು.

ಹೌದು. ಹುಬ್ಬಳ್ಳಿ ತಾಲೂಕಿನ ಸುತಗಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಬ್ಬದ ಸಂಭ್ರಮ ಮನೆ‌ ಮಾಡಿತ್ತು. ಕಲಿಕಾ ಚೇತರಿಕೆಯೊಂದಿಗೆ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಇಳಕಲ್ ಸೀರೆಯುಟ್ಟು ಮಿಂಚುತ್ತಿದ್ದರು. ಕೋವಿಡ್ ಕಾರಣ 2 ವರ್ಷಗಳಿಂದ ಉಂಟಾಗಿರುವ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ ಕಲಿಕಾ ಚೇತರಿಕೆ ಹಮ್ಮಿಕೊಂಡಿದ್ದು, ಅದರಂತೆ ಸುತಗಟ್ಟಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಿನೂತನವಾದ ಆಟದೊಂದಿಗೆ 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸಿದ್ದಾರೆ.

ವಿದ್ಯಾರ್ಥಿನಿಯರು ಶಾಲೆಯ ಆವರಣದಲ್ಲಿ ಥೇಟ್‌ ಹಳ್ಳಿಗರಂತೆ ಕೈಯಿಂದ ಧಾನ್ಯಗಳನ್ನು ಸ್ವಚ್ಛಗೊಳಿಸಿ, ಅದನ್ನು ಕುಟ್ಟಿ ಹಿಟ್ಟು ಮಾಡಿದರು. ನಂತರ ಸೌದೆಗಳಿಂದ ಒಲೆ ಹೊತ್ತಿಸಿ ರೊಟ್ಟಿ ಬಡೆದರು. ಉತ್ತರ ಕರ್ನಾಟಕದ ತರಹವೇವಾರಿ ಅಡುಗೆ ಮಾಡಿ ಖುಷಿಪಟ್ಟರೇ, ಇತ್ತ ವಿದ್ಯಾರ್ಥಿಗಳು ರೈತನಾಗಿ ಹೊಲದಲ್ಲಿ ಎತ್ತುಗಳಿಂದ ಉಳುಮೆ ಮಾಡಿ, ಕಳೆ ತೆಗೆದರು.

ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲೆ ಎಂಬುದು ಕೇವಲ ಶಾಲೆಯಾಗದೇ ಅರಿವಿನ ಬುತ್ತಿಯನ್ನು ನೀಡಬೇಕು. ಇದೇ ನಿಟ್ಟಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಸಖತ್ ಎಂಜಾಯ್ ಮಾಡಿದರು.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/05/2022 07:23 pm

Cinque Terre

138.89 K

Cinque Terre

7

ಸಂಬಂಧಿತ ಸುದ್ದಿ