ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸೇವಿಸುವುದು ಬಿಡಿ ಮಾದಕ.. ನಿಮ್ಮ ಜೀವಕ್ಕೆ ಅದು ಬಾಧಕ

ಧಾರವಾಡ: ಮಾದಕ ದ್ರವ್ಯ ಮತ್ತು ವ್ಯಸನಗಳ ವಿರುದ್ಧ ನಶಾ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮವನ್ನು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಧಾರವಾಡದ ಬಾಸೆಲ್ ಮಿಶನ್ ಕಾಂಪೌಂಡ್ ನಲ್ಲಿರುವ ರಿಶ್ ಮೆಮೋರಿಯಲ್ ಚರ್ಚ್ ನಲ್ಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಸಾನಿಧ್ಯವನ್ನು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿಕೊಂಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಡಾ.ಜಿ.ಎನ್. ಜಗದೀಶ್ ವಹಿಸಿಕೊಂಡಿದ್ದರು. ಧಾರವಾಡ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹಾಗೂ ರಾಜ್ಯದ ಜಯ ಕರ್ನಾಟಕ ಸಂಘಟನೆ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನರೇಂದ್ರ ಟೋಲ್ ಗೇಟ್ ನಿಂದ ಮಾದಕ ವಸ್ತುಗಳ ಕುರಿತು ಬೈಕ್ ಹಾಗೂ ಕಾರು ಮೆರವಣಿಗೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

25/09/2020 05:35 pm

Cinque Terre

13.54 K

Cinque Terre

0

ಸಂಬಂಧಿತ ಸುದ್ದಿ