ಹುಬ್ಬಳ್ಳಿ: ಮನೆಯಲ್ಲಿ ಹೇಳದೇ ಕೇಳದೆ ಮನೆಬಿಟ್ಟು ಬಂದಿರುವ ಬಾಲಕನೋರ್ವನನ್ನು ಪಾಲಕರಿಗೆ ತಲುಪಿಸುವ ಮೂಲಕ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಹುಬ್ಬಳ್ಳಿ ಪತ್ರಕರ್ತರ ಸಂಘದ ಪತ್ರಕರ್ತರು ಮಾನವೀಯತೆ ಮೆರೆದಿದ್ದಾರೆ.
ಬೆಳಿಗ್ಗೆ ಪ್ರೆಸ್ ಕ್ಲಬ್ ಗೆ ಏಕಾಏಕಿ ಒಬ್ಬ ಪುಟ್ಟ ಬಾಲಕ ಪತ್ರಿಕೆ ಹಾಕುವ ಕೆಲಸ ಕೇಳಿಕೊಂಡು ಬಂದಿದ್ದಾನೆ.ಆಗ ಬಾಲಕನ ಬಗ್ಗೆ ವಿಚಾರಣೆ ಮಾಡಿದ ಪತ್ರಕರ್ತರು ಉಪಹಾರ ನೀಡಿ ಉಪಚರಿಸಿ ಬಾಲಕನನ್ನು ಪಾಲಕರಿಗೆ ತಲುಪಿಸುವಲ್ಲಿ ಪೊಲೀಸ್ ಸಿಬ್ಬಂದಿಗಳ ನೇತೃತ್ವದಲ್ಲಿ ಮಾನವೀಯತೆ ಮೆರೆದಿದ್ದಾರೆ.
ಇನ್ನೂ ಬಾಲಕನ ಪಾಲಕರು ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.
Kshetra Samachara
23/09/2020 09:53 pm