ನವಲಗುಂದ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತೋತ್ಸವದ ಅಂಗವಾಗಿ ಕರುನಾಡ ವಿಜಯಸೇನೆ ಸಂಘಟನೆಯೂ ಬೆಳಗಾವಿಯ ಗಾಂಧೀ ಭವನದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆ ಮಂಗಳವಾರ ನವಲಗುಂದ ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿ ಚಾಲನೆ ನೀಡಲಾಯಿತು.
ಆಗಸ್ಟ್ 29 ಕ್ಕೆ ಸಂಗೊಳ್ಳಿ ರಾಯಣ್ಣನ ಅದ್ದೂರಿ ಉತ್ಸವ ಕೈಗೊಳ್ಳಲಾಗಿದ್ದು, ಇಂದು ಸಂಜೆ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಚಾಲನೆ ನೀಡಿದರು. ವಾಹನ ನವಲಗುಂದ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲೂ ಸಂಚರಿಸಿ, ಸಾರ್ವಜನಿಕರಿಗೆ ರಾಯಣ್ಣನ ತ್ಯಾಗ ಬಲಿದಾನದ ಬಗ್ಗೆ ಅರಿವು ಮೂಡಿಸಲಿದೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ರಾಜ್ಯ ಯುವ ಘಟಕ ಅಧ್ಯಕ್ಷರು ಮಹೇಶ್ ಆರ್ ಎಸ್, ರಾಜ್ಯ ಉಪಾಧ್ಯಕ್ಷರು ಸಚಿದಾನಂದ, ರಾಜ್ಯ ಪ್ರದಾನ ಕಾರ್ಯದರ್ಶಿ ಶಿವಪುತ್ರ ಗಾನದಾಳ, ತಾಲೂಕಾ ಅಧ್ಯಕ್ಷ ಅರುಣಕುಮಾರ, ರಾಜ್ಯ ಸಮಿತಿ ಶಿವು ಕಂಬಾರ , ಜಿಲ್ಲಾ ಯುವ ಘಟಕ ಅಧ್ಯಕ್ಷ ಕುಮಾರ ಲಕ್ಕಮ್ಮಣ್ಣವರ, ಜಿಲ್ಲಾ ಅಧ್ಯಕ್ಷರು ಅಜಯ ಹಿರೇಮಠ, ಜಿಲ್ಲಾ ಗೌರವ ಅಧ್ಯಕ್ಷರು ರಾಮು ಹಳಿಕೇರಿ, ತಾಲೂಕ ಗೌರವ ಅಧ್ಯಕ್ಷರು ಮುತ್ತು ದೊಡಮನಿ ತಾಲೂಕ ಯುವ ಅಧ್ಯಕ್ಷರು ಪ್ರಕಾಶ ಗೊಂದಾಳೆ ನಗರ ಅಧ್ಯಕ್ಷರು ನಾಗರಾಜ ಕಾತರಾಳ ಸೇರಿದಂತೆ ಹಲವರು ಇದ್ದರು.
Kshetra Samachara
23/08/2022 07:16 pm