ಹುಬ್ಬಳ್ಳಿ: ಅಖಿಲ ಕರ್ನಾಟಕ ಅಯ್ಯಪ್ಪ ಸ್ವಾಮಿ ಸೇವಾ ಸೈನ್ಯದ ರಾಜ್ಯಾಧ್ಯಕ್ಷರಾದ ಕೆ ಎಂ ಮೋಹನ್ ಗುರುಸ್ವಾಮಿಗಳು ಶಬರಿನಗರ ಕುಸುಗಲ್ ರೋಡ್ ಕೇಶ್ವಾಪುರ ಹುಬ್ಬಳ್ಳಿ ಇವರು ಹಾಡಿರುವ (VOL22) ಅಂತರಂಗದ ಜ್ಯೋತಿ ಅಯ್ಯಪ್ಪ ಹಾಗೂ ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಭಕ್ತಿ ಗೀತೆಗಳನ್ನು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೆಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು.
ಶಬರಿನಗರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕುಸುಗಲ್ ರೋಡ್ ಹುಬ್ಬಳ್ಳಿ ಈ ಕ್ಷೇತ್ರವು ಜಾಗೃತಿ ಕ್ಷೇತ್ರ ಹಾಗೂ ಭಕ್ತರ ಇಷ್ಟಾರ್ಥವನ್ನು ನೆರವೇರಿಸುವಂತಹ ಚೇತನ ಶಕ್ತಿಯ ಕ್ಷೇತ್ರವಾಗಿದೆ ಎಂದು ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ಹೇಳಿದರು.
ಈ ಸಂಧರ್ಭದಲ್ಲಿ ಮಹೇಶ ದಾಬಡೆ, ವಿ ಎಸ್ ವಿ ಪ್ರಸಾದ, ಗುರುರಾಜ ಹೂಗಾರ,ಅಮಿತ್ ರವದಿ, ಅಭಿಷೇಕ ರವದಿ, ಗಣೇಶ್ ದ್ಯಾವನಕೊಂಡ, ಸೈಮನ ಡೇವಿಡ್, ಬಸವರಾಜ ನೇವಿನೂರ, ಯಲ್ಲಪ್ಪ ಬಾಗಲಕೋಟ, ರಮೇಶ ಸ್ವಾಮಿ ಕಲಘಟಗಿ ಉಪಸ್ಥಿತರಿದ್ದರು.
Kshetra Samachara
20/12/2020 09:45 pm