ಹುಬ್ಬಳ್ಳಿ : ನಗರದ ಸುನಿಧಿ ಕಲಾ ಸೌರಭ ಹಾಗೂ PublicNext ಸುದ್ದಿ ಮಾಧ್ಯಮ ಪಾಲುದಾರಿಕೆಯಲ್ಲಿ ಆಯೋಜಿಸಿದ್ದ ಅನ್ ಲೈನ್ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ವಿಜೇತ ಮಕ್ಕಳ ವಿವರ ಇಂತಿದೆ.
"ಅ" ವಿಭಾಗದಲ್ಲಿ ಬಾಲಕರು : ಅಕ್ಷರ S ( ಬೆಂಗಳೂರು) ಪ್ರಥಮ , ಗೋವರ್ಧನ (ಹುಬ್ಬಳ್ಳಿ) ದ್ವಿತೀಯ , ಶ್ರೀನಿವಾಸ ಹರ್ತಿ ಹಾಗೂ ನಮನ ಕನವಳ್ಳಿಮಠ ತೃತೀಯ ಬಹುಮಾನಕ್ಕೆ ಭಾಜನರಾಗಿದ್ದಾರೆ.
"ಅ''ವಿಭಾಗ ಬಾಲಕಿಯರು : ಸಾನ್ವಿ R ಕಲಕೋಟಿ ಪ್ರಥಮ, ಸಾಕ್ಷಿ R ಕಲಕೋಟಿ ದ್ವಿತೀಯ, ನಿತ್ಯಾ ನಾಯಕ ತೃತೀಯ ಬಹುಮಾನ ಪಡೆದಿದ್ದಾರೆ.
"ಬಿ'' ವಿಭಾಗ ಬಾಲಕರು : ಮಯೂರ ಹಿರೇಮಠ ಪ್ರಥಮ , M P ಪ್ರತೀಕ (ಬೆಂಗಳೂರು)ದ್ವಿತೀಯ , ಸಂಭ್ರಮ S D ಮೂರನೇ ಬಹುಮಾನ ಪಡೆದಿದ್ದಾರೆ.
"ಬಿ''ವಿಭಾಗ ಬಾಲಕಿಯರು : ತೃಷಾ ಮುರಗೋಡ ಪ್ರಥಮ, ಸುಷ್ಮಾ ನೇಮಣ್ಣವರ್ ದ್ವಿತೀಯ, ಶ್ರಾವಣಿ ವಿಶ್ವಕರ್ಮ ತೃತೀಯ ಬಹುಮಾನ ಪಡೆದಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಪಾಲುದಾರಿಕೆಯಲ್ಲಿ ಹಮ್ಮಿಕೊಂಡಿದ್ದ ಈ ಸ್ಪಧೆಯಲ್ಲಿ ಕರ್ನಾಟಕದಾತ್ಯಂತ ಒಟ್ಟು 197 ಮಕ್ಕಳು ಭಾಗವಹಿಸಿದ್ದರು. ಆನ್ ಲೈನ್ ಮೂಲಕ ತಮ್ಮ ಏಕ ಪಾತ್ರಾಭಿನಯದ ವಿಡಿಯೋವನ್ನು ಕಳುಹಿಸಿದ ಮಕ್ಕಳಿಗೆ , ಅವರ ಪಾಲಕರಿಗೆ , ಪೋಷಕರಿಗೆ , ಶಿಕ್ಷಕರಿಗೆ ವಂದನೆಗಳು... ಅಭಿನಂದನೆಗಳು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಆನ್ ಲೈನ್ ಮೂಲಕ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸುನಿಧಿ ಕಲಾ ಸೌರಭದ ಕಾರ್ಯದರ್ಶಿ ಶ್ರೀಮತಿ ವೀಣಾ ಅಠವಲೆ ತಿಳಿಸಿದ್ದಾರೆ.
ದಿ.10 ರಂದು ಪ್ರಶಸ್ತಿ ಪ್ರದಾನ
ದಿ. 10 ರಂದು ಸಂಜೆ 6 ಕ್ಕೆ ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಡಾ: ಎಂ.ಜಿ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಂಗಾಯಣದ ನಿರ್ದೇಶಕ ರಮೇಶ ಪರವಿನಾಯಕ ಮುಖ್ಯ ಅತಿಥಿಯಾಗಿ ಹಾಗೂ ಹಿರಿಯ ಪತ್ರಕರ್ತ ಹಾಗೂ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಲಹೆಗಾರ ಕೇಶವ ನಾಡಕರ್ಣಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನಿಂಗಣ್ಣ ಕುಂಠಿ ಅಧ್ಯಕ್ಷತೆ ವಹಿಸಲಿದ್ದು ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು. ಡಾ: ವಿಜಯ ಕಾಮತ್ ಹಾಗೂ ಶ್ರೀಮತಿ ಸುನಂದಾ ನಿಂಬನಗೌಡರ ಅವರನ್ನು ಸನ್ಮಾನಿಸಲಾಗುವುದು.
ಪ್ರಶಸ್ತಿ ವಿಜೇತ ಮಕ್ಕಳಿಂದ ಏಕಪಾತ್ರ ಅಭಿನಯ ಕಾರ್ಯಕ್ರಮ ನಡೆಯಲಿದೆ, ಎಲ್ಲ ಕಲಾಭಿಮಾನಿಗಳು ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಕೋರಲಾಗಿದೆ.
Kshetra Samachara
09/12/2020 10:32 am