ನವಲಗುಂದ : ಕಾರ್ತಿಕ ಮಾಸದ ಪ್ರಯುಕ್ತ ಗುರುವಾರ 70 ವರ್ಷಗಳ ಇತಿಹಾಸವಿರುವ ನವಲಗುಂದ ಪಟ್ಟಣದ ಗಣಪತಿ ದೇವಸ್ಥಾನ ದೀಪಗಳಿಂದ ಶೃಂಗರಿಸಲ್ಪಟ್ಟಿತ್ತು, ಪಲ್ಲಕ್ಕಿಯಲ್ಲಿ ಗಣಪನನ್ನು ಕೂರಿಸಿ ಪೂಜೆ ಸಲ್ಲಿಸಲಾಯಿತು.
ಇನ್ನೂ ಕಾರ್ಯಕ್ರಮ ಸಂಜೆ ವೇಳೆಗೆ ಆರಂಭವಾಗಿ ಕಾರ್ತಿಕೋತ್ಸವದ ಪಾಲಿಕೆ ಉತ್ಸವ ಜರುಗಿತು. ದೇವಸ್ಥಾನಕ್ಕೆ ಬಂದ ಭಕ್ತರು ದೀಪಗಳನ್ನು ಹಚ್ಚಿ ದೇವಸ್ಥಾನವನ್ನು ಕಂಗೊಳಿಸುವಂತೆ ಮಾಡಿದ್ದರು.
ಇನ್ನೂ ಈ ಪೂಜೆಗೆ ನವಲಗುಂದ ಪಟ್ಟಣದ ಜನರು ದೇವಸ್ಥಾನದತ್ತ ಮುಖ ಮಾಡಿದ್ದರು. ಈ ವೇಳೆ ದೇವಸ್ಥಾನಕ್ಕೆ ಬಂದ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ ಧರಿಸಬೇಕು ಎಂಬುದಾಗಿ ಪ್ರಕಟಣೆ ಕೂಡ ಹೊರಡಿಸಲಾಗಿತ್ತು.
Kshetra Samachara
03/12/2020 09:29 pm