ನವಲಗುಂದ : ಗೌರಿ ಹುಣ್ಣಿಮೆ ನಿಮಿತ್ತ ನವಲಗುಂದ ಪಟ್ಟಣದ ಜನರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು, ಪಟಾಕಿಗಳನ್ನು ಸಿಡಿಸಿ, ಇಹಲೋಕ ತ್ಯಜಿಸಿದ ಹಿರಿಯರಿಗೆ ಲೋಬಾನ ಹಾಕಿ, ಸಕ್ಕರೆ ಗೊಂಬೆಗಳನ್ನಿಟ್ಟು ಪೂಜೆ ಸಲ್ಲಿಸಿದರು. ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಗೌರಿ ಹುಣ್ಣಿಮೆಯನ್ನು ಹಿರಿಯರ ಹಬ್ಬ ಅಂತಾನೆ ಆಚರಣೆ ಮಾಡಲಾಗುತ್ತೆ, ಇಹಲೋಕ ತ್ಯಜಿಸಿದ ಹಿರಿಯರಿಗೆ ಲೋಬಾನ ಹಾಕುವ ಸಂಪ್ರದಾಯವಿದ್ದು, ಈ ದಿನ ತಮ್ಮ ತಮ್ಮ ಮನೆಗಳಲ್ಲಿ ಹಿರಿಯರ ಭಾವಚಿತ್ರವಿಟ್ಟು, ಅವರಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನಿಟ್ಟು ಅದಕ್ಕೆ ಪೂಜೆ ಸಲ್ಲಿಸಿ ಲೋಬಾನ ಬಿಟ್ಟರು. ಇನ್ನೂ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು ಸೀರೆ ಉಟ್ಟು, ಆರತಿ ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳನ್ನು ಇಟ್ಟು ಸಂಭ್ರಮ ಪಟ್ಟರು. ಇದೆ ವೇಳೆ ಪಟಾಕಿ ಹೊಡೆದು ಸಂಭ್ರಮಿಸಿದರು.
Kshetra Samachara
30/11/2020 10:32 pm