ಕಲಘಟಗಿ: ರಾಷ್ಟ್ರೀಯ ಭಾವೈಕ್ಯತೆಯ ಸಂದೇಶವನ್ನೊಳಗೊಂಡ "ಕರ್ತೃ ಶ್ರೀ ಜಗದ್ಗುರು ಶಿರಹಟ್ಟಿ ಫಕೀರೇಶ್ವರ ಮಹಾತ್ಮೆ" ನಾಟಕ
ಡಿಸೆಂಬರ್ 1 ರಿಂದ ಪಟ್ಟಣದ ಬಮ್ಮಿಗಟ್ಟಿ ರಸ್ತೆಯಲ್ಲಿನ ಭವ್ಯ ರಂಗಸಜ್ಜಿಕೆಯಲ್ಲಿ ಪ್ರದರ್ಶನಗೊಳ್ಳಲಿದ್ದು, ಪ್ರೇಕ್ಷಕರು ನಾಟಕವನ್ನು ನೋಡಿ ಪ್ರೋತ್ಸಾಹಿಸುವಂತೆ ಶಿರೂರಿನ ವಿಶ್ವಭಾರತಿ ರಮ್ಯ ನಾಟಕ ಸಂಘದ ಮಾಲೀಕರಾದ ಬಸವರಾಜ ಬೆಂಗೇರಿ ತಿಳಿಸಿದರು.
ಅವರು ಪಟ್ಟಣದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ದಿಲ್ಲಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಅಭಿನಯಿಸಲ್ಪಟ್ಟ ಏಕೈಕ ಕನ್ನಡ ನಾಟಕ ಇದಾಗಿದ್ದು,ಕಲಾವಿದ ಬಸವರಾಜ ಬೆಂಗೇರಿ ಫಕ್ಕಿರೇಶ್ವರರ ಪಾತ್ರದಲ್ಲಿ ಅಭಿನಯಿಸಲಿದ್ದು,ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸುವಂತೆ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಮಾರುತಿ ಬೆಂಗೇರಿ,ಮೌಲಾಸಾಬ್ ಗುಡಗೇರಿ,ಬಸವರಾಜ ಶಿರಸನಾಳ ಉಪಸ್ಥಿತರಿದ್ದರು.
Kshetra Samachara
30/11/2020 08:32 pm