ನವಲಗುಂದ : ಹಳ್ಳಿ ಸಂಪ್ರದಾಯಗಳು ಇನ್ನೂ ತಾಲೂಕು ಪಟ್ಟಣಗಳಲ್ಲಿ ಜೀವಂತವಾಗಿದೆ ಎಂಬುದಕ್ಕೆ ಇಲ್ಲಿ ಆಚರಿಸಲಾಗುವ ಹಬ್ಬದ ಸಡಗರವೇ ಸಾಕ್ಷಿ ಎನ್ನಬಹುದು, ಯಾಕಂದ್ರೆ ಇಂದು ಗೌರಿ ಹಬ್ಬದ ನಿಮಿತ್ತ ನವಲಗುಂದ ಪಟ್ಟಣದ ಜನರು ಸಕ್ಕರೆ ಗೊಂಬೆ ಕೊಳ್ಳುವುದರಲ್ಲಿ ಫುಲ್ ಬ್ಯುಸಿ ಆಗಿದ್ರು.
ಹೆಂಗಸರು, ಗಂಡಸರು ಎನ್ನದೇ ಸಕ್ಕರೆ ಗೊಂಬೆಯನ್ನು ಕೊಳ್ಳಲು ಜನರು ಮಾರುಕಟ್ಟೆಗೆ ಮುಗಿ ಬಿದ್ದಿರೊ ದೃಶ್ಯಗಳೇ ಇದಕ್ಕೆ ಸಾಕ್ಷಿ,
ಇನ್ನೂ ಮಾರುಕಟ್ಟೆಯಲ್ಲಿ ಶಿವ, ಪಾರ್ವತಿ, ಒಂಟೆ, ಆನೆ, ರಥ, ಅರ್ಜುನನ ಬಿಲ್ಲು, ಮಂಟಪ, ಆಂಜನೇಯ, ಬಸವಣ್ಣ ಹೀಗೆ ವಿವಿಧ ರೀತಿಯ ಪಶು ಪಕ್ಷಿಗಳು ಅನೇಕ ಕಲಾಕೃತಿಗಳಲ್ಲಿ ವಿಧ ವಿಧದ ಬಣ್ಣಗಳಲ್ಲಿ ತಯಾರಾಗಿದ್ದು, ಸಂಜೆ ಆಚರಿಸಲಾಗುವ ಗೌರಿ ಹಬ್ಬಕ್ಕೆ ಇಂದು ಮುಂಜಾನೆಯಿಂದಲೇ ಜನರು ಸಕಲ ತಯಾರಿ ಮಾಡಿಕೊಂಡಿದ್ದಾರೆ.
Kshetra Samachara
30/11/2020 02:29 pm