ನವಲಗುಂದ : ದೀಪಗಳ ಹಬ್ಬ ದೀಪಾವಳಿ ಆದ್ರೆ ಈ ಹಬ್ಬದ ಬೆನ್ನೆಲೆ ಬರೋದೇ ತುಳಸಿ ಮದುವೆ, ಈ ಹಬ್ಬಕ್ಕೂ ಸಹ ದೀಪಗಳದ್ದೇ ಮೇಲು ಗೈ ಇಂತಹ ಹಬ್ಬಕ್ಕೆ ಇಂದು ಬೆಳಿಗ್ಗೆಯಿಂದಲೇ ನವಲಗುಂದದ ಜನತೆ ಸಿದ್ಧತೆಗಳನ್ನು ಮಾಡಿಕೊಂಡು ಸಂಜೆ ವೇಳೆಗೆ ಮನೆಗಳ ಮುಂದೆ ದೀಪಗಳು ರಾರಾಜಿಸಲು ಆರಂಭಿಸಿದ್ದವು.
ಈ ಹಬ್ಬವನ್ನು ಸಂಜೆಯ ಸಮಯದಲ್ಲಿ ಮಾಡುವ ರೂಢಿ ಇದ್ದು, ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನೂ ನೆಟ್ಟು, ಬಣ್ಣ ಹಚ್ಚಿ ಶೃಂಗರಿಸಿ, ವೃಂದಾವನದಲ್ಲಿ ಕಬ್ಬು, ಚೆಂಡು ಹೂವು, ಹುಣಸೆ ಹಣ್ಣು, ನೆಲ್ಲಿಕಾಯಿ ಇಟ್ಟು ನವಲಗುಂದದ ಪ್ರತಿ ಮನೆಯ ಅಂಗಳದಲ್ಲಿ ಇಂದು ಪೂಜೆ ಸಲ್ಲಿಸಲಾಯಿತು.
Kshetra Samachara
26/11/2020 09:35 pm