ನವಲಗುಂದ : ನಾಟಕ ಪ್ರಿಯರು ವೃತ್ತಿ ರಂಗಭೂಮಿ ಕಲಾವಿದರ ಕೈ ಹಿಡಿದ್ದಿದ್ದಾರೆ ಎಂಬುದಕ್ಕೆ ನವಲಗುಂದದಲ್ಲಿ ಪ್ರದರ್ಶನಗೊಳ್ಳುತ್ತಿರುವ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ ಎಂಬುವ ನಾಟಕವೇ ಒಳ್ಳೇ ಉದಾಹರಣೆ ಎನ್ನಬಹುದು.
ಕಳೆದ ಒಂದು ವಾರದಿಂದ ನವಲಗುಂದದ ನವೀನ ಪಾರ್ಕ್ ಬಳಿ ಆರಂಭವಾದ ನಾಟಕ ಪ್ರದರ್ಶನಕ್ಕೆ ನವಲಗುಂದದ ನಾಟಕ ಪ್ರಿಯರು ಕಿಕ್ಕಿರಿದು ನಾಟಕವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಇದರಿಂದ ಕೊರೋನಾ ಹಿನ್ನಲೆ ಸಂಕಷ್ಟಕ್ಕೆ ಸಿಲುಕಿದ್ದ ವೃತ್ತಿ ರಂಗಭೂಮಿ ಕಲಾವಿದರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಬಹುದು.
Kshetra Samachara
26/11/2020 10:33 am