ಕುಂದಗೋಳ : ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಒಳಾಂಗಣ ಕ್ರೀಡಾಂಗಣದ ನಿರ್ಮಾಣ ಕಾಮಗಾರಿಗೆ ಕುಂದಗೋಳ ಕ್ರೀಡಾ ಸಂಸ್ಥೆಯ ಸರ್ವ ಸದಸ್ಯರು ದೀಪಾವಳಿ ಪಾಂಡ್ಯದ ಶುಭದಿನವಾದ ಇಂದು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಸದಸ್ಯರು ಇದು ಗ್ರಾಮೀಣ ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ತರಬೇತಿ ನೀಡುವ ದೃಷ್ಟಿಯಿಂದ ಈ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಆರಂಭವಾಗಿದ್ದು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಪ್ರತಿಭೆಗಳು ಕುಂದಗೋಳ ಕ್ರೀಡಾಂಗಣದಲ್ಲಿ ತರಬೇತಿ ಪಡೆದು ಹೆಸರು ಮಾಡಬೇಕೆನ್ನುವುದೆ ನಮ್ಮ ಸದುದ್ದೇಶ ಎಂದರು.
ಈ ಸಂದರ್ಭದಲ್ಲಿ ಕುಂದಗೋಳ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಕಲಾಲ ಹಾಗೂ ಸರ್ವ ಸದಸ್ಯರು ಗೆಳೆಯರ ಬಳಗದವರು ಉಪಸ್ಥಿತರಿದ್ದರು.
Kshetra Samachara
17/11/2020 02:53 pm