ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನಿ ಪೀನಿ ಗುಜಾನಿಗೋ: ಹೀಗೊಂದು ವಿಶಿಷ್ಟ ಆಚರಣೆ

ಧಾರವಾಡ-ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿಗಳು ಒಂದಿಲ್ಲೊಂದು ವಿಶೇಷತೆ ಹೊಂದಿರುತ್ತವೆ. ಅವು ನೆಲದ ಸೊಗಡು, ಹಾಡು, ಪಾಡುಗಳನ್ನು ಪ್ರತಿನಿಧಿಸುತ್ತವೆ‌. ಅಂದ್ ಹಾಗೆ ನೀವೀಗ ನೋಡ್ತಿದೀರಲ್ಲ. ಇದು ಕೂಡ ಒಂದು ವಿಶಿಷ್ಟ ಆಚರಣೆ. ಶೀಗಿ ಹುಣ್ಣಿಮೆಯಂದು ಆರಂಭವಾಗುವ ಆನಿ ಪೀನಿ ಗುಜಾನಿಗೋ ಎಂಬ ಈ ಆಚರಣೆ ದೀಪಾವಳಿಯ ಕೊನೆ ದಿನದವರೆಗೂ ನಡೆಯುತ್ತದೆ‌. ಅಂದಿನಿಂದ ಪ್ರತಿದಿನ ಈ ದೀಪವನ್ನು ಹೊತ್ತು ಮನೆ ಮನೆಗೆ ಸಾಗುವ ಬಾಲಕರು ಧಾನ್ಯ ನೀಡುವಂತೆ ಕೇಳುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಉತ್ತತ್ತಿ, ಹಣ್ಣು, ಅಥವಾ ಹಣ ಕೊಡುವಂತೆ ಕೇಳುತ್ತಾರೆ. ಇನ್ನೊಂದು ವಿಶೇಷ ಅಂದ್ರೆ ಶೀಗಿ ಹುಣ್ಣೆಮೆಯಂದು ಹಚ್ಚುವ ಈ ದೀಪ ದೀಪಾವಳಿಯ ಕೊನೆ ದಿನದವರೆಗೂ ಶಾಂತವಾಗದಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದರೆ ಮನೆಯ ದನಕರುಗಳ ಮೈಯಲ್ಲಿನ ಉಣ್ಣೆ ಹಾಗೂ ಇತರ ಕ್ರಿಮಿ ಕೀಟಗಳು ತೊಲಗುತ್ತವೆ ಎಂಬ ನಂಬಿಕೆ ಈಗಲೂ ಇದೆ. ಈ ಆಚರಣೆ ಜನಪದ ಗೀತ ಪ್ರಕಾರವೊಂದಕ್ಕೆ ಜನ್ಮ ನೀಡಿದೆ. ಆ ಹಾಡನ್ನು ನೀವೇ ಕೇಳಿ. ಅಂದ್ ಹಾಗೆ ಈ ದೃಶ್ಯ ಕಂಡುಬಂದಿದ್ದು ಧಾರವಾಡ ತಾಲೂಕು ನರೇಂದ್ರ ಗ್ರಾಮದಲ್ಲಿ.

Edited By : Nagaraj Tulugeri
Kshetra Samachara

Kshetra Samachara

16/11/2020 08:40 pm

Cinque Terre

60.33 K

Cinque Terre

1

ಸಂಬಂಧಿತ ಸುದ್ದಿ