ಧಾರವಾಡ : ಭಾರತದ ಕಲೆ, ಸಾಹಿತ್ಯ, ಸಂಗೀತ ಪರಂಪರೆಯು ಶ್ರೀಮಂತವಾಗಿದ್ದು, ನಾವು ನಮ್ಮ ಜಾನಪದಕಲೆ, ಸಂಸ್ಕೃತಿಗಳನ್ನು ಮರೆತರೆ ನಮ್ಮತನವನ್ನು ಮರೆತಂತೆಯಾಗುತ್ತದೆ. ಸಾಂಸ್ಕøತಿಕ ಪರಂಪರೆಯನ್ನು ಮುಂದುವರೆಸಲು ಯುವಕರು ಆಸಕ್ತಿವಹಿಸಿ ಪಾಲ್ಗೊಳ್ಳಬೇಕೆಂದು ಬೃಹತ, ಮದ್ಯಮ ಕೈಗಾರಿಕಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸಂಜೆ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ನಡೆದ 2019-2020ನೇ ಸಾಲಿನ ರಾಜ್ಯ ಮಟ್ಟದ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಪ್ರದಾನ ಮಾಡಿ, ಮಾತನಾಡಿದರು.
ಅಕಾಡಮಿ ಗೌರವ ಪ್ರಶಸ್ತಿಯನ್ನು ಜಾನಪದ ತಜ್ಞ ಡಾ. ಶ್ರೀಶೈಲ್ ಹುದ್ದಾರ ಅವರಿಗೆ ಗೌರವಧನ, ಪ್ರಶಸ್ತಿ ಪತ್ರ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಎಮ್.ಎಸ್. ಮಾಳವಾಡ ಗೌರವಧನ ಮತ್ತು ಪ್ರಶಸ್ತಿ ಪತ್ರ ನೀಡಿ, ಅವರು ಗೌರವಿಸಿದರು.
Kshetra Samachara
08/11/2020 08:35 pm