ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೃಷಿ ಕಾಯ್ದೆ ವಿರೋಧಿಸಿ ನವಲಗುಂದದಲ್ಲಿ ಪ್ರಚಾರ ಜಾಥ

ನವಲಗುಂದ : ಕೃಷಿ ಕಾಯ್ದೆ ವಿರೋಧಿಸಿ ದೇಶವ್ಯಾಪ್ತಿ ನಡೆಯುತ್ತಿರುವ ಪ್ರತಿಭಟನೆಗೆ ಇಂದು ನವಲಗುಂದದಲ್ಲಿಯೂ ಹಲವು ಸಂಘಟನೆಗಳಿಂದ ಪ್ರಚಾರ ಜಾಥ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ನವಲಗುಂದದ ರೈತ ಭವನದ ಎದುರು ರೈತ ವಿರೋಧಿ ಕೃಷಿ ಸಂಬಂಧಿತ ನೂತನ ಕಾನೂನುಗಳು ಮತ್ತು ಕಾರ್ಮಿಕ ವಿರೋಧಿ, ಕಾರ್ಮಿಕ ಸಂಹಿತೆಗಳ ವಿರುದ್ಧ CITU, KPRS, ATAWU, JMS, DYFI, SFI ಸಂಘಟನೆಗಳ ನೇತೃತ್ವದಲ್ಲಿ ಬೀದಿನಾಟಕ ಪ್ರದರ್ಶನ, ಜಾಗೃತಿ ಹಾಡುಗಳು, ಪ್ರಚಾರ ಸಭೆಗಳು, ಕರಪತ್ರ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇನ್ನು ಈ ಪ್ರಚಾರ ಜಾಥ ಜನವರಿ 22 ರಿಂದ 30ರ ವರೆಗೆ ನಡೆಯಲಿದ್ದು, ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳ ನಂದಗಡದಿಂದ ಪ್ರಾರಂಭವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟ, ಧಾರವಾಡ, ಗದಗ ಜಿಲ್ಲೆಗಳಲ್ಲಿ ನೆರವೇರಲಿದೆ. ಆಹಾರ ಭದ್ರತೆ, ಉದ್ಯೋಗದ ಉಳಿವಿಗಾಗಿ, ಜೀವನಾವಶ್ಯಕ ವಸ್ತುಗಳಾದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ, ವಿದ್ಯುತ್, ಬ್ಯಾಂಕ್, ವಿಮೆ, ರೈಲು, ನೀರು, ಹಣಕಾಸು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಈ ಪ್ರಚಾರ ಜಾಥಾ ನಡೆಯುತ್ತಿದೆ.

Edited By : Manjunath H D
Kshetra Samachara

Kshetra Samachara

28/01/2021 07:54 pm

Cinque Terre

25.72 K

Cinque Terre

2

ಸಂಬಂಧಿತ ಸುದ್ದಿ