ಕಲಘಟಗಿ : ಕರ್ನಾಟಕ ಸಂಗ್ರಾಮ ಸೇನೆವತಿಯಿಂದ ಶಾಸಕ ಸಿ ಎಮ್ ನಿಂಬಣ್ಣವರಗೆ ಕಂಕಣ ಕಟ್ಟಿ ರಾಜ್ಯೋತ್ಸವನ್ನು ಸರಳವಾಗಿ ಆಚರಿಸಲಾಯಿತು.
ಪಟ್ಟಣದ ಹನುಮಾನ ದೇವಸ್ಥಾನದ ಹತ್ತಿರ ಸಂಗ್ರಾಮ ಸೇನಾ ಪದಾಧಿಕಾರಿಗಳು ಜನಪ್ರತಿನಿಧಿಗಳಿಗೆ,ಪತ್ರಕರ್ತರಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ಕಂಕಣಕಟ್ಟಿ ರಾಜ್ಯೋತ್ಸವದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಸಂಗ್ರಾಮ ಸೇನೆಯ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ,ಉಪಾಧ್ಯಕ್ಷ ಶಂಕರಗೌಡ ಭಾವಿಕಟ್ಟಿ,ವಿದ್ಯಾರ್ಥಿ ಘಟಕದ ತಾಲೂಕ ಅಧ್ಯಕ್ಷ ನಿತಿಶಗೌಡ ತಡಸ,ಸುಭಾಸ ಕಂಪ್ಲಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
01/11/2020 02:34 pm