ಧಾರವಾಡ: ಇಂದು ನಾಡಿನಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಧಾರವಾಡದ ಕೆಲಗೇರಿಯ ಮಹರ್ಷಿ ವಾಲ್ಮೀಕಿ ಸೇವಾ ಸಂಘದ ವತಿಯಿಂದ ಕೃತಕ ಆನೆ ಮೇಲೆ ಮಹರ್ಷಿ ವಾಲ್ಮೀಕಿ ಮೂರ್ತಿಯನ್ನು ಮೆರವಣಿಗೆ ಮಾಡುವ ಮೂಲಕ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಓಮಿನಿ ವಾಹನದ ಮೂಲಕ ಸಿದ್ಧಪಡಿಸಿದ್ದ ಕೃತಕ ಆನೆಯನ್ನು ಬಳಸಿಕೊಂಡ ಸಂಘದ ಸದಸ್ಯರು ಆಶೀರ್ವಾದ ಗಣಪತಿ ದೇವಸ್ಥಾನದಿಂದ ವಾಲ್ಮೀಕಿ ಮೂರ್ತಿಯನ್ನು ಮೆರವಣಿಗೆ ಮಾಡಿದರು.
Kshetra Samachara
31/10/2020 09:08 pm