ಹುಬ್ಬಳ್ಳಿ: ಪ್ರತಿ ಸೀಗೆ ಹುಣ್ಣಿಮೆ ದಿನ ಬರುವ ವಾಲ್ಮೀಕಿ ಜಯಂತಿಯನ್ನು, ಪುರಾತನ ಕಾಲದಿಂದಲು ಆಚರಣೆ ಮಾಡುತ್ತಾ ಬಂದಿದ್ದಾರೆ. ಅದೇ ರೀತಿಯಾಗಿ ಇಂದು ವಾಲ್ಮೀಕಿ ಜಯಂತಿ ಅಂಗವಾಗಿ, ಧಾರವಾಡ ಜಿಲ್ಲಾ ವಾಲ್ಮೀಕಿ ಸಂಘದ ವತಿಯಿಂದ ನಗರದ ಇಂಧಿರಾ ಗಾಜಿನ ಮನೆಯಲ್ಲಿರು ವಾಲ್ಮೀಕಿ ಪುತ್ಥಳಿಗೆ ಮಹಾಪೂಜೆ ಮಾಡುವುದರ ಮೂಲಕ ಸರಳವಾಗಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಹುಡೆದ, ಶಿವಪ್ಪ ಪೂಜಾರ, ಶಿವಾನಂದ ಕೋನಸಾಗರ, ಗುರುನಾಥ ಯಾವಗಲ್, ಸಂತೋಷ ಗುಂಜಾಳ ಮುಂತಾದವರಿದ್ದರು.
Kshetra Samachara
31/10/2020 01:55 pm