ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಭೂತಾಯಿಗೆ ಉಡಿ ತುಂಬಿದ ರೈತರು

ಧಾರವಾಡ: ಮುಂಗಾರು ಕಳೆದು ಹಿಂಗಾರು ಬಿತ್ತನೆ ಕೂಡ ನಡೆಯುತ್ತಿದೆ. ಹಿಂಗಾರು ಹಂಗಾಮಿನ ಹೊಸ್ತಿಲಲ್ಲಿ ಬರುವ ಸೀಗೆ ಹುಣ್ಣಿಮೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ವಿಶಿಷ್ಟವಾಗಿ ಆಚರಿಸಲಾಗುತ್ತದೆ.

ಶುಕ್ರವಾರ ಧಾರವಾಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಸೀಗೆ ಹುಣ್ಣಿಮೆಯನ್ನು ಆಚರಿಸಲಾಯಿತು. ಇನ್ನೂ ಕೆಲವೊಂದಿಷ್ಟು ಕಡೆಗಳಲ್ಲಿ ಶನಿವಾರ ಸೀಗೆ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ.

ಭಾನುವಾರ ಭೂತಾಯಿಗೆ ಉಡಿ ತುಂಬಿದ ರೈತ ಸಮುದಾಯ ಸಹಕುಟುಂಬ ಸಮೇತರಾಗಿ ಹೊಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಚೆರಗ ಚೆಲ್ಲಿ ಹಿಂಗಾರು ಫಸಲು ಚೆನ್ನಾಗಿ ಬರಲೆಂದು ಬೇಡಿಕೊಂಡರು.

ಇತ್ತ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಕುಟುಂಬ ಸಮೇತರಾಗಿ ನೀರಲಕಟ್ಟಿಯಲ್ಲಿರುವ ತಮ್ಮ ಹೊಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

30/10/2020 05:12 pm

Cinque Terre

15.89 K

Cinque Terre

1

ಸಂಬಂಧಿತ ಸುದ್ದಿ