ಹುಬ್ಬಳ್ಳಿ- ಎಸ್ ಪಿ ಬಿ ಅವರ ಸ್ಮರಣಾರ್ಥವಾಗಿ ನಾದಲೋಕ ಕಲಾವೇದಿಕೆಯ ವತಿಯಿಂದ, ಬಾವ ಗಾಯನ ಕಾರ್ಯಕ್ರಮವನ್ನು ನಗರದ ಗೋಕುಲ್ ರಸ್ತೆಯಲ್ಲಿರುವ ಶುಭೋದಯ ಹಾಲನಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಎಸ್ ಪಿ ಬಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರು ಹಾಡಿದ ಹಾಡುಗಳನ್ನು ಹಾಡುವುದರ ಮೂಲಕ ಎಸ್ ಪಿ ಬಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ನಾದಲೋಕ ಕಲಾವೇದಿಕೆಯ ಅಧ್ಯಕ ಆರ್ ಎಂ ಗೋಗೇರಿ, ಹಾಗೂ ಸಮಾಜ ಸೇವಕ ಮಂಜುನಾಥ ಹೆಬಸುರ ಹಾಗೂ ನಾದಲೋಕ ಕಲಾವೇದಿಕೆಯ ಸದಸ್ಯರು ಹಾಗೂ ಬಾಲಸುಬ್ರಹ್ಮಣ್ಯಂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು..
Kshetra Samachara
30/10/2020 02:38 pm