ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಮರಿಪೇಟೆಯಲ್ಲಿ ವಿಶಿಷ್ಟ ರೀತಿ ದಸರಾ ಆಚರಣೆ: ಮೈನವಿರೇಳಿಸುವ ದೃಶ್ಯಕ್ಕೆ ಸಾಕ್ಷಿ ಆಯ್ತು ಕಾಳಗ

ಹುಬ್ಬಳ್ಳಿ: ಅದು ವಾಣಿಜ್ಯನಗರಿಯ ಪ್ರತಿಷ್ಠಿತವಾದ ಪೇಟೆ. ಆ ಪೇಟೆಯಲ್ಲಿ ಪ್ರತಿವರ್ಷವೂ ದಸರಾ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ.ತಮಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಮನರಂಜನೆ ನೀಡುವ ಮೂಲಕ ವಿಜಯದಶಮಿಯನ್ನು ಆಚರಣೆ ಮಾಡಲಾಗುತ್ತದ್ದು,ನೋಡುಗರ ಒಂದು ಕ್ಷಣ ಅಚ್ಚರಿಗೊಳ್ಳುವುದಂತೂ ಖಂಡಿತ.ಏನಿದು ಆಚರಣೆ ಏನು ವಿಶೇಷ.. ಅಂತೀರಾ ತೋರಿಸ್ತಿವಿ ನೋಡಿ...

ಇಲ್ಲಿ ಒಂದನ್ನು ಒಂದು ಹಿಂದಿಕ್ಕಿಸುವಂತೆ ಆಕ್ರಮಣಕಾರಿಯಾಗಿ ಬರುತ್ತಿರುವ ಟಗರು,ಎದುರಾಳಿಯನ್ನು ಹೈರಾಣಾಗಿಸಲು ಮತ್ತೊಂದು ರೀತಿಯ ಪರಾಕ್ರಮ,ನೋಡುಗರಲ್ಲಿ ಕುತೂಹಲ ಕೆರಳಿಸಿ ಕೇಕೆ ಸಿಳ್ಳೇ ಹೊಡೆಯುವಂತೆ ಮಾಡುವ ವಾತಾವರಣ ನಿರ್ಮಾಣ ಮಾಡಿರುವುದು ಹುಬ್ಬಳ್ಳಿಯ ಕಮರಿಪೇಟೆಯ ಟಗರಿನ ಕಾಳಗ...ರೋಷದಿಂದ ನುಗ್ಗಿ ಬರುವ ಟಗರು...ಮತ್ತೊಂದು ತಡೆದು ತಲೆಗೆ ತಲೆ ಕೊಟ್ಟು ಹೋರಾಡುವ ಮತ್ತೊಂದು ಟಗರು ಇಂತಹ ವಿಶಿಷ್ಠವಾದ ಸಂದರ್ಭಕ್ಕೆ ಸಾಕ್ಷಿಯಾಗಿತು ಟಗರಿನ ಕಾಳಗ...

ಉತ್ತರ ಕರ್ನಾಟಕದ ಹೃದಯ ಭಾಗದಲ್ಲಿರುವ ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ದಸರಾ ಹಬ್ಬವನ್ನು ಟಗರಿನ ಕಾಳಗದ ಮೂಲಕ ಆಚರಣೆ ಮಾಡಲಾಗುತ್ತದೆ.ಸುಮಾರು ವರ್ಷಗಳಿಂದ ಟಗರಿನ ಕಾಳಗದ ಮೂಲಕ ಆಚರಣೆ ಮಾಡಲಾಗುತ್ತಿದ್ದು,ಈ ಕಾಳಗಕ್ಕೆ ಐತಿಹಾಸಿಕ ಪರಂಪರೆ ಹೊಂದಿದೆ.ಮನುಷ್ಯರಿಗೆ ಮಾತ್ರ ಮನರಂಜನೆಯಲ್ಲ ಪ್ರಾಣಿಗಳಿಗೂ ಕೂಡ ಒಂದು ಸ್ಪರ್ಧೆಯ ಮೂಲಕ ಮನರಂಜನೆ ನೀಡಬೇಕು ಎಂಬುವಂತ ಸದುದ್ದೇಶದಿಂದ ಕಮರಿಪೇಟೆಯಲ್ಲಿ ಪ್ರತಿವರ್ಷವೂ ಟಗರಿನ ಕಾಳಗ ಆಯೋಜನೆ ಮಾಡಲಾಗುತ್ತದೆ.

ಪ್ರತಿವರ್ಷ ಕೂಡ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು.ಆದರೇ ಈ ಬಾರಿ ಮಹಾಮಾರಿ ಕಿಲ್ಲರ್ ಕೊರೋನಾದ ಆತಂಕದಿಂದ ಸಂಕ್ಷಿಪ್ತವಾಗಿ ಆಚರಣೆ ಮಾಡಲಾಗಿದೆ.ಅಲ್ಲದೇ ಸಂಪ್ರದಾಯದ ಆಚರಣೆ ಕೈ ಬಿಡಬಾರದು ಎಂಬುವ ಹಿನ್ನೆಲೆಯಲ್ಲಿ ಆಚರಣೆ ಮಾಡಲಾಗಿದೆ.ಇನ್ನೂ ಈ ಟಗರಿನ ಕಾಳಗ ಸ್ನೇಹ, ಪ್ರೀತಿ ಸಹಬಾಳ್ವೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಇಲ್ಲಿನ ಜನರು...

Edited By : Manjunath H D
Kshetra Samachara

Kshetra Samachara

24/10/2020 09:39 pm

Cinque Terre

53.87 K

Cinque Terre

2

ಸಂಬಂಧಿತ ಸುದ್ದಿ