ಧಾರವಾಡ: ಕೊರೊನಾ ಹೊಡೆತಕ್ಕೆ ಸಿಲುಕಿ ಹಬ್ಬ, ಹುಣ್ಣಿಮೆಗಳು ಕಳೆ ಕಳೆದುಕೊಂಡಿವೆ. ಆದರೆ, ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಕೊರೊನಾ ನಿಯಮಾವಳಿಗಳನ್ನು ಅನುಸರಿಸಿ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಗ್ರಾಮದ ಬನಶಂಕರಿ ದೇವಿಗೆ ಪ್ರತಿನಿತ್ಯ ಒಂದೊಂದು ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ಶುಕ್ರವಾರ ಬನಶಂಕರಿಗೆ ತರಕಾರಿಯಿಂದ ಅಲಂಕಾರ ಮಾಡಲಾಗಿತ್ತು.
ಅಲ್ಲದೇ ದೇವಸ್ಥಾನದಲ್ಲಿ ರಾಜೀವ್ ಭಟ್ ಅವರ ನೇತೃತ್ವದಲ್ಲಿ ನೂರಾರು ಜನ ಸುಮಂಗಲೆಯರಿಂದ 1008 ಲಲಿತಾ ಸಹಸ್ರ ನಾಮಾವಳಿ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶುಕ್ರವಾರ ಮಾಡಲಾಗಿದ್ದ ತರಕಾರಿ ಅಲಂಕಾರದಿಂದ ದೇವಿಯ ಮೂರ್ತಿ ಕಂಗೊಳಿಸುತ್ತಿತ್ತು ಈ ದರ್ಶನ ಪಡೆದ ಗ್ರಾಮಸ್ಥರು ತಾಯಿಯ ಕೃಪೆಗೆ ಪಾತ್ರರಾದರು.
Kshetra Samachara
23/10/2020 09:43 pm