ಕಲಘಟಗಿ: ಪಟ್ಟಣದಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಭಾರತ ಸ್ವಾತಂತ್ರದ ಪ್ರಪ್ರಥಮ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನವರ 242 ನೇ ಜಯಂತ್ಯುತ್ಸವನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ತಹಶೀಲ್ದಾರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ,ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರು ಕಿತ್ತೂರು ರಾಣಿ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿರಸ್ತೆದಾರ ಸುರೇಶ ಅಡವಿ,ಸಿಪಿಐ ವಿಜಯ ಬಿರಾದಾರ,ಸಿ ಬಿ ಹೊನ್ನಳ್ಳಿ,ಉಳವಪ್ಪ ಬಳಿಗೇರ,ವಜ್ರಕುಮಾರ ಮಾದನಬಾವಿ,ಮಂಜುನಾಥ ಮುರಳ್ಳಿ,ಲಿಂಗರಡ್ಡಿ ನಡುವಿನಮನಿ,ರಾಜಶೇಖರ ಮೆಣಸಿನಕಾಯಿ,ನಾಗರಾಜ ಗಂಜಿಗಟ್ಟಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
23/10/2020 08:57 pm