ಧಾರವಾಡ: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಧಾರವಾಡದ ದುರ್ಗಾದೇವಿ ಇಂದು ತರಕಾರಿಯಿಂದ ವಿಶಿಷ್ಟವಾಗಿ ಅಲಂಕೃತಗೊಂಡು ಕಂಗೊಳಿಸಿದಳು.
ಧಾರವಾಡದ ದುರ್ಗಾದೇವಿಗೆ ಪ್ರತಿದಿನ ಒಂದೊಂದು ರೀತಿಯಲ್ಲಿ ಅಲಂಕಾರ ಮಾಡಲಾಗುತ್ತಿದೆ. ಒಂದು ದಿನ ಮುತ್ತು, ಇನ್ನೊಂದು ದಿನ ಬಳೆಗಳಿಂದ ದುರ್ಗಾದೇವಿ ಅಲಂಕೃತಗೊಂಡಿದ್ದಳು. ಇಂದು ವಿಶಿಷ್ಟವಾಗಿ ದುರ್ಗಾದೇವಿಯನ್ನು ಗಜ್ಜರಿ, ಬದನೆ, ಆಲೂಗಡ್ಡೆ, ಬೆಂಡೆಕಾಯಿ, ಮೆಣಸಿನಕಾಯಿ, ಟೊಮ್ಯಾಟೋ ಸೇರಿದಂತೆ ಇತರ ತರಕಾರಿಗಳಿಂದ ವಿಶಿಷ್ಟವಾಗಿ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು.
ಒಂಬತ್ತು ದಿನಗಳ ಕಾಲ ದುರ್ಗಾದೇವಿಯನ್ನು ಬಗೆ ಬಗೆಯ ರೀತಿಯಲ್ಲಿ ಸಿಂಗರಿಸಲಾಗುತ್ತಿದ್ದು, ಇಂದು ತರಕಾರಿಯಿಂದ ಸಿಂಗಾರಗೊಂಡ ದುರ್ಗೆ ಎಲ್ಲರ ಕಣ್ಮನ ಸೆಳೆದಳು.
Kshetra Samachara
22/10/2020 09:29 pm