ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗುಡಗೇರಿ ದ್ಯಾಮವ್ವನಿಗೆ ವಿಶಿಷ್ಟ ಅಲಂಕಾರದ ಘಟ್ಟದ ಕಾರ್ಯಕ್ರಮ

ಕುಂದಗೋಳ : ಇಂದು ಮಹಾನವಮಿ ಅಮಾವಾಸ್ಯೆ ಪ್ರಯುಕ್ತ ಕುಂದಗೋಳ ತಾಲೂಕಿನ ಐತಿಹಾಸಿಕ ದೇವಸ್ಥಾನ ಹಾಗೂ ಸಂತ ಶಿಶುನಾಳ ಶರೀಫರಿಗೆ ತನ್ನ ಮೂಗುತಿ ನೀಡಿದ ಪವಾಡ ಸ್ವರೂಪಿನಿ ಗುಡಗೇರಿ ದ್ಯಾಮವ್ವನಿಗೆ ವಿಶೇಷ ಅಲಂಕಾರದ ಪೂಜೆ ಕೈಗೊಳ್ಳಲಾಗಿದ್ದು ನಾಳೆಯಿಂದ ಒಂಬ್ಬತ್ತ ದಿನಗಳ ಕಾಲ ಘಟ್ಟ (ದೀಪ ಬೆಳಗಿಸುವ) ಕಾರ್ಯಕ್ರಮ ನಡೆಯಲಿದೆ.

ಇನ್ನು ಕುಂದಗೋಳ ಪಟ್ಟಣದ ರೈತಾಪಿ ಕುಲದ ಶಕ್ತಿ ದೇವತೆ ಗಾಳಿಮರೇಮ್ಮ ದೇವಿಗೂ ಇಂದು ಭಕ್ತರಿಂದ ವಿಶೇಷ ಪೂಜೆ ಸಲ್ಲಿದ್ದು ಈ ದೇವಸ್ಥಾನದಲ್ಲೂ ಕೂಡಾ ಘಟ್ಟ ದ ಕಾರ್ಯಕ್ರಮ ನಡೆಯಲಿದ್ದು ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಚಾಮುಂಡೇಶ್ವರಿಗೆ ಅಲ್ಲಿನ ರೈತರಿಂದಲೇ ಪೂಜೆ ಸಲ್ಲಿದೆ ಮಹಾನವಮಿ ಅಮಾವಾಸ್ಯೆ ನಂತರದಲ್ಲಿ ಸತತ 9 ದಿನಗಳ ಕಾಲ ದೇವಿಗೆ ಒಂಬತ್ತು ಅವತಾರ ಮಾಡಿ ಪ್ರತಿದಿನ ಪೂಜೆ ಹಾಗೂ ದೀಪ ಬೆಳಗಿಸಿ ದೇವಿಯ ಪುರಾಣ ಚರಿತ್ರೆಯನ್ನು ಒದಲಾಗುತ್ತದೆ ಇದರಂತೇ ಎಲ್ಲ ದೇವಸ್ಥಾನಗಳಲ್ಲೂ ಈ ಕಾರ್ಯ ಪೂಜೆಗಳು ಮುಂದುವರೆಯುತ್ತದೆ.

Edited By : Manjunath H D
Kshetra Samachara

Kshetra Samachara

16/10/2020 08:19 pm

Cinque Terre

18.51 K

Cinque Terre

1

ಸಂಬಂಧಿತ ಸುದ್ದಿ